

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಾತಿ, ಧರ್ಮ ಮೀರಿ ಸಂವಿಧಾನ ನೋಡಿಕೊಂಡಾಗ ಮಾತ್ರ ಅದು ಒಳ್ಳೆಯ ಸಂವಿಧಾನ ಆಗಿರಲು ಸಾಧ್ಯ ಎಂದು ಮಾನವ ಹಕ್ಕುಗಳ ತ ಡಾ. ಲೋಹಿತ ನಾಯ್ಕರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಭಾನುವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ "ಅಂಬೇಡ್ಕರರ ಚಿಂತನೆಯಲ್ಲಿ ಚುನಾವಣೆ' ಕುರಿತು ಅವರು ಉಪನ್ಯಾಸ ನೀಡಿದರು.
ಸಂವಿಧಾನ ಯಾವಾಗಲೂ ಒಳ್ಳೆಯದಾಗಿಯೇ ಇದೆ. ಆದರೆ ಅದು ಯಾರ ಕೈಯಲ್ಲಿ ಇರುತ್ತದಯೋ ಹಾಗೆ ಇರುವುದು. ಒಳ್ಳೆಯವರ ಕೈಯಲ್ಲಿದ್ದರೆ ಒಳ್ಳೆಯದಾಗಲಿದೆ. ಕೆಟ್ಟವರ ಕೈಯಲ್ಲಿದ್ದರೆ ಕೆಟ್ಟದ್ದಾಗಿರುತ್ತದೆ. ಮೂಲತಃ ಅಂಬೇಡ್ಕರ್ ಅಮೇರಿಕಾದ ಅಧ್ಯಯ ಮಾದರಿಯ ಪ್ರಜಾಪ್ರಭುತ್ವದ ಬಗ್ಗೆ ಒಲವು ಹೊಂದಿದ್ದರು. ಆಥಿರ್ಕವಾಗಿ ಅಸಮಾನತೆ ಇದ್ದಾಗ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ. ಹಣ ಇದ್ದವರು ಚುನಾವಣೆಗೆ ನಿಲ್ಲುತ್ತಾರೆ. ಆಳುವವರು ಮತ್ತು ಆಳಿಸಿಕೊಳ್ಳುವವರ ವ್ಯವಸ್ಥೆ ರೂಪಗೊಳ್ಳುತ್ತದೆ ಎಂಬ ವಿಚಾರವನ್ನು ಅಂಬೇಡ್ಕರ್ ಹೊಂದಿದ್ದರು. ಆದರೆ ಸಂವಿಧಾನ ರಚನಾ ಕಾಲಕ್ಕೆ ಅಂಬೇಡ್ಕರ್ ವಿಚಾರಗಳಿಗೆ ವಿರೋಧ ವ್ಯಕ್ತವಾಗಿ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನ ರೂಪಗೊಂಡಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂದ ಕಾರ್ಯಾಧ್ಯ ಬಸವಪ್ರಭು ಹೊಸಕೇರಿ ಮಾತನಾಡಿ, ಸಮಾನತೆ ತರುವ ವಿಚಾರ ಬಂದಾಗ ಅಂಬೇಡ್ಕರ್ ಮತ್ತು ಗಾಂಧೀಜಿ ಅವರನ್ನು ಒಟ್ಟಿಗೆ ಇಟ್ಟುಕೊಂಡು ಚಿಂತಿಸಬೇಕು ಎಂದರು.
ಸಂದ ಅಧ್ಯ ಚಂದ್ರಕಾಂತ ಬೆಲ್ಲದ, ಸತೀಶ ತುರಮರಿ, ಡಾ. ಸಂಜೀವ ಕುಲಕಣಿರ್, ಗುರು ಹಿರೇಮಠ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಪ್ರೊ. ಎಸ್.ಎಂ. ಕುಂದರಗಿ, ಎಂ.ಎಂ. ಚಿಕ್ಕಮಠ, ಎನ್.ಆರ್. ಬಾಳಿಕಾಯಿ, ರಾಜೇಂದ್ರ ಸಾವಳಗಿ, ಶ್ರೀಶೈಲಗೌಡ ಕಮತರ, ಪ್ರತಿಭಾ ಕುಲಕಣಿರ್, ಬಾಲಬಳಗ ಶಾಲೆ ಶಿಕರು, ಇತರರು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು.