ಸಂವಿಧಾನವು ಸಮಾನತೆ, ಸ್ಮಾರಕ, ಪರಂಪರೆಯ ಶ್ರೀರಕ್ಷೆ

17 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದ ಸಂವಿಧಾನ ಸಮಾನತೆಯ ಮೂಲವಾಗಿದೆ. ಸಂವಿಧಾನವು ಭಾರತದ ಶ್ರೀಮಂತ ಪರಂಪರೆ, ಸ್ಮಾರಕ ಮತ್ತು ಇತಿಹಾಸದ ಶ್ರೀರಕ್ಷೆವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹೇಳಿದರು.
ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾ ನಿಮಿತ್ತ ಶನಿವಾರ ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಸಂವಿಧಾನಕ್ಕೆ 75 ವರ್ಷ ರ್ಪೂಣಗೊಂಡಿದ್ದರಿಂದ ಆಯೋಜಿಸಿರುವ ಸಂವಿಧಾನ ಜಾಗೃತಿ ಜಾಥಾಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಪಾರಂಪರಿಕ ನಡಿಗೆ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಪ್ರಥಮವಾಗಿದೆ. ಶಾಲಾ ಶಿಣ ಇಲಾಖೆ ನೇತೃತ್ವದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 10 ಸಾವಿರಕ್ಕೂ ಹೆಚ್ಚು ವಿದ್ಯಾಥಿರ್ಗಳು ಭಾಗವಹಿಸಿದ್ದರು ಎಂದರು.
ಮಕ್ಕಳಲ್ಲಿ ಸಂವಿಧಾನ ಮಹತ್ವದ ಜತೆಗೆ ಪ್ರಮುಖ, ಐತಿಹಾಸಿಕ ಸ್ಥಳಗಳ, ಸ್ಮಾರಕಗಳು, ಜಿಲ್ಲೆಯ ಪ್ರಮುಖ ಸಾಧಕರ ಇತಿಹಾಸ ಪರಿಚಯಿಸಲಾಯಿತು. ಡಾ.ಬಿ.ಆರ್​.ಅಂಬೇಡ್ಕರ್​ ತಂಗಿದ್ದ ಬುದ್ಧರಕ್ಕಿತ ವಸತಿ ಪ್ರೌಢ ಶಾಲೆ ಆವರಣದಲ್ಲಿ ದೊಡ್ಡ ಸಂಖ್ಯೆಯ ವಿದ್ಯಾಥಿರ್ಗಳು ಸೇರಿದ್ದು ಐತಿಹಾಸಿಕ ದಾಖಲೆಯಾಗಿದೆ. ಮಕ್ಕಳಲ್ಲಿ ಸಂವಿಧಾನ ಅರಿವು ಮೂಡಿಸುವುದು ಮಹತ್ವದ್ದು. ಸಂವಿಧಾನ ಸಮಾನತೆ, ಸಹೋದರತ್ವ ಮತ್ತು ಪರಸ್ಪರ ಸಾಮರಸ್ಯ ಬೆಳೆಸುತ್ತಿದೆ. ಹೀಗಾಗಿ ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸಿ, ಜಾಗೃತಗೊಳಿಸುವುದು ಅಗತ್ಯ ಎಂದರು.
ಕರ್ನಾಟಕ ಕಾಲೇಜಿನಿಂದ ಆರಂಭವಾದ ಜಾಥಾ ಬುದ್ಧರಕ್ಕಿತ ವಸತಿ ಪ್ರೌಢ ಶಾಲೆ ಆವರಣದಲ್ಲಿ ಸಮಾವೇಶಗೊಂಡಿತು. 10ನೇ ತರಗತಿ ವಿದ್ಯಾಥಿರ್ ಅಜಯ ಚಲವಾದಿ ಸಂವಿಧಾನ ಪಿಠೀಕೆ ಬೋಧಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾ-ಕಾರದ ಸದಸ್ಯ ಕಾರ್ಯದಶಿರ್ ಪಿ.ಎ್​.ದೊಡ್ಡಮನಿ, ಜಿಪಂ ಸಿಇಒ ಸ್ವರೂಪ ಟಿ.ಕೆ., ಶಹರ ಶಿಣಾ-ಧಿಕಾರಿ ಅಶೋಕ ಸಿಂದಗಿ, ಡಾ.ಗಣೇಶ ದೇವಿ, ಡಾ.ಸುರೇಖಾ ದೇವಿ, ಸದಾನಂದ ಅಮರಾಪುರ, ಸಂತೋಷ ಜಕ್ಕಪ್ಪನವರ, ಜಿ.ಎಚ್​.ನಾಗಾವಿ, ಪ್ರೊ. ಕೆ.ಜಿ. ಆಡೂರ, ಅಶೋಕ ದೊಡಮನಿ, ಲಕ್ಷ$್ಮಣ ಬಕ್ಕಾಯಿ, ದೇವೇಂದ್ರ ರತ್ನಾಕರ, ವಿವಿಧ ಇಲಾಖೆ ಅಧಿಕಾರಿಗಳು, ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರು, ವಿದ್ಯಾಥಿರ್ಗಳು, ಇತರರು ಇದ್ದರು.
ಜಾಥಾದಲ್ಲಿ ಇವಾಲ್ವ್​ ಲೈವ್ಸ್​ ಸಂಸ್ಥೆ ಮುಖ್ಯಸ್ಥೆ ಓಟಿಲಿ ಅನ್ಬನ್​ಕುಮಾರ ಐತಿಹಾಸಿಕ ಸ್ಥಳದ ಹಿನ್ನೆಲೆ, ಮಹತ್ವ ತಿಳಿಸಿದರು. ಎ್​.ಎಚ್​.ಜಕ್ಕಪ್ಪನವರ ಸ್ವಾಗತಿಸಿದರು. ಅಲ್ಲಾಭಕ್ಷ ಎಂ.ಎಸ್​. ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್​.ಎಸ್​. ಕೆಳದಿಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net