

ರಾಯಚೂರು ಅಪಾಯದಲ್ಲಿರುವ ಸಂವಿಧಾನ ಉಳಿಸಿಕೊಳ್ಳಲು, ಸಮಾನತೆ,ನ್ಯಾಯವನ್ನು ಖಾತ್ರಿಪಡಿಸಿಕೊಳ್ಳಲು ಸಂವಿಧಾನ ಸಂರಕ್ಷಣಾ ಪಡೆ ಏ.೨೬ ರಂದು ದಾವಣೆಗೆರೆಯ ಬೀರಲಿಂಗೇಶ್ವರ ದೇವಸ್ಥನದ ಆವರಣದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ಆಯೋಜಿಸಲಾಗಿದೆ ಎಂದು ದೇಶಪ್ರೇಮಿ ಯುವಾಂದೋಲನದ ಸಂಚಾಲಕ ಸಂರೋವರ ಬೆಂಕಿಕಟ್ಟಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ರೂಪಿತವಾಗಿರುವ ಸಂವಿಧಾನ ಆಶಯಗಳ ವಿರುದ್ದವಾಗಿ ನಡೆದುಕೊಳ್ಳಲಾಗುತ್ತಿದೆ. ಶಿಕ್ಷಣ ಹಕ್ಕಾಗುವವ ಬದಲು ಮಾರಾಟದ ಸರಕಾಗಿ ಮಾರ್ಪಟ್ಟಿದೆ. ಹಣಕೊಟ್ಟವರಿಗೆ ಒಂದು, ಇಲ್ಲದವರಿಗೆ ಇನ್ನೊಂದು ಶಿಕ್ಷಣ ನೀಡಲಾಗುತ್ತಿದೆ.
ನಿರುದ್ಯೋಗ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ. ವಿದ್ಯಾವಂತರು ಶಿಕ್ಷಣ ಪಡೆದು ಉದ್ಯೋಗ ಇಲ್ಲದೇ ಹೋಗುತ್ತಿದ್ದಾರೆ. ಜಾತಿ,ಧರ್ಮದ ಹೆಸರಿನಲ್ಲಿ ಯುವಕರನ್ನು ಪ್ರತ್ಯೇಕಿಸಲಾಗುತ್ತಿದೆ. ಬಹುತ್ವದ ಸಂವಿಧಾನವನ್ನು ಉಳಿಸಿಕೊಳ್ಳಲು ಮುಂದೆ ಬರಬೇಕಾದ ಅವಶ್ಯಕತೆಯಿದೆ.
ಆದರಿಂದ ಯುವಕರು ಸಂವಿಧಾನ ಉಳಿಸಲು ಮುಂದಾಗಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯAದು ಕಲಬುರಗಿ ಜಿಲ್ಲೆಯ ವಾಡಿಯಿಂದ ಬೈಕ್ ರ‍್ಯಾಲಿ ಪ್ರಾರಂಭಿಸಲಾಗಿದ್ದು ವಿವಿಧ ಜಿಲ್ಲೆ, ತಾಲೂಕಗಳಲ್ಲಿ
ಸಂಚರಿಸಿ ದಾವಣೆಗೆರೆಯಲ್ಲಿ ಸಮಾವೇಶಗೊಳ್ಳಲಾಗುತ್ತದೆ. ಯುವಕರು ಸ್ವಯಂಪ್ರೇರಿತವಾಗಿ ದಾವಣೆಗೆರೆ ಆಗಮಿಸಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಬದಲ್ಲಿ ಕೌಶಲ್ಯ ಮಂಡ್ಯ, ಯಮುನಾ, ಮೈಲಾರಿ, ಮಾರೇಪ್ಪ ಹರವಿ,ಮಹೇಂದ್ರ, ಖಾಜಾ ಅಸ್ಲಂ ಪಾಷಾ, ಆಂಜಿನೇಯ್ಯ ಕುರುಬದೊಡ್ಡಿ, ಶ್ರೀನಿವಾಸ ಕೊಪ್ಪರ ಇದ್ದರು.