

ಉಡುಪಿ: ಭಾರತೀಯರಿಗೆ ಸಂವಿಧಾನವೇ ಧರ್ಮಗ್ರಂಥ. ಆದರೆ ದೇಶದ ಒಳಗೆ ಅಥವಾ ಹೊರಗೆ ಯಾವುದೇ ಸಮಸ್ಯೆಗಳು ಉದ್ಭವಿಸದಿದ್ದರೂ ಸ್ವಾರ್ಥಕ್ಕಾಗಿ ಸಂವಿಧಾನವನ್ನು 21 ತಿಂಗಳು ಅಮಾನತಿನಲ್ಲಿಟ್ಟಿದ್ದ ಕಾಂಗ್ರೆಸ್ ಸಂವಿಧಾನ ಪರ ಎಂಬುದು ಹಾಸ್ಯಾಸ್ಪದ ಸಂಗತಿ ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದರು.
ಸಿಟಿಜನ್ಸ್ ಾರ್ ಸೋಶಿಯಲ್ ಜಸ್ಟೀಸ್ ಸಂಟನೆ ವತಿಯಿಂದ ನಡೆದ ಸಂವಿಧಾನ ದಿನಾಚರಣೆ ಮತ್ತು ನ.26ರಿಂದ ಜ.26ರ ವರೆಗೆ ಹಮ್ಮಿಕೊಂಡಿರುವ ಸಂವಿಧಾನ ಸನ್ಮಾನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು 2015ರಲ್ಲಿ ಮೊದಲ ಬಾರಿಗೆ ನ.26ರಂದು ಸಂವಿಧಾನ ದಿನಾಚರಣೆ ಪ್ರಾರಂಭಿಸಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ದಿನವನ್ನು ರಾಷ್ಟ್ರೀಯ ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು. ಮೋದಿ ಸರ್ಕಾರ ಅಂಬೇಡ್ಕರ್ ಅವರಿಗೆ ಸಂಬಂಧಪಟ್ಟ ಸ್ಥಳಗಳ ಅಭಿವೃದ್ಧಿಗೆ 300 ಕೋಟಿ ರೂ. ಅನುದಾನ ನೀಡಿದೆ ಎಂದು ಹೇಳಿದರು.
ಹಿಂದೂ ಸಮಾಜದಲ್ಲಿ ಪುರುಷರಷ್ಟೇ ಮಹಿಳೆಯರೂ ಸಮಾನ ಹಕ್ಕುಗಳು ಸಿಗಬೇಕು ಎಂಬ ಉದ್ದೇಶದಿಂದ ಅಂಬೇಡ್ಕರ್ ಮಂಡಿಸಿದ್ದ ಹಿಂದೂ ಕೋಡ್ ಬಿಲ್ ಸಂಸತ್ತಿನಲ್ಲಿ ಪಾಸ್ ಆಗಲು ನೆಹರೂ ಅವರು ಬಿಡಲಿಲ್ಲ. ಇದು ಸಂವಿಧಾನಕ್ಕೆ ಮಾಡಿದ ಮೊದಲ ಅಪಚಾರವಾಗಿದ್ದು, ದೇಶದ ಶೇ.50ರಷ್ಟು ಜನಸಂಖ್ಯೆಗೆ ನ್ಯಾಯ ಒದಗಿಸದ ಕಾಂಗ್ರೆಸ್ ಸಂವಿಧಾನ ಪರವಾಗಿದೆಯೇ ಎಂದು ಪ್ರಶ್ನಿಸಿದರು.
6 ಪಂಚವಾರ್ಷಿಕ ಯೋಜನೆಗಳಲ್ಲಿ ದಲಿತರಿಗೆ ನಯಾ ಪೈಸೆಯನ್ನೂ ಕಾಂಗ್ರೆಸ್ ನೀಡಿರಲಿಲ್ಲ. 1984ರಲ್ಲಿ ಕೆ.ಆರ್. ನಾರಾಯಣನ್ ಸಚಿವರಾಗಿದ್ದಾಗ ಮೊದಲ ಬಾರಿಗೆ ದಲಿತರಿಗೆ ಅನುದಾನ ಒದಗಿಸಿದ್ದರು. ಸಂವಿಧಾನಕ್ಕೆ ಒಟ್ಟು 106 ಬಾರಿ ತಿದ್ದುಪಡಿಗಳನ್ನು ಮಾಡಲಾಗಿದ್ದು, ಇದರಲ್ಲಿ 14 ಅಟಲ್ ಬಿಹಾರಿ ವಾಜಪೇಯಿ ಮತ್ತು ಮೋದಿ 8 ತಿದ್ದುಪಡಿ ಮಾಡಿದ್ದರು. ಉಳಿದ 75 ತಿದ್ದುಪಡಿಗಳು ಕಾಂಗ್ರೆಸ್ ಕಾಲಟ್ಟದಲ್ಲಿ ನಡೆದಿವೆ ಎಂದು ಮಾಹಿತಿ ನೀಡಿದರು.
ದಲಿತ ಮುಖಂಡ ಗೋಕುಲ್ ದಾಸ್ ಬಾರ್ಕೂರು ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಚಿಂತಕ ಚರಣ್ ಗುಂಜೂರು ಬೆಂಗಳೂರು ಸಂವಿಧಾನದ ಆಶಯಗಳ ಕುರಿತು ಮಾತನಾಡಿದರು. ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಮಾಜಿ ಜಿಪಂ ಅಧ್ಯಕ್ಷ ದಿನಕರ ಬಾಬು, ಬರಹಗಾರ ವಿಕಾಸ್ ಪುತ್ತೂರು, ಅಭಿಯಾನದ ಜಿಲ್ಲಾ ಸಂಚಾಲಕಿ ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಸಹ ಸಂಚಾಲಕ ಎ.ಉಮೇಶ್ ನಾಯ್ಕ್ ಚೇರ್ಕಾಡಿ ಉಪಸ್ಥಿತರಿದ್ದರು. ಶ್ರೀಕಾಂತ್ ನಾಯಕ್ ಸ್ವಾಗತಿಸಿ, ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.