ಮಾಲ್ದಾರೆ ಸಹಕಾರ ಸಂಘದಲ್ಲಿ ಸಂವಿಧಾನ ದಿನಾಚರಣೆ

ಚಿತ್ರ 27ಎಸ್ ಡಿ ಪಿ 2
Published on

ಸಿದ್ದಾಪುರ: ಅಂಬೇಡ್ಕರ್ ಸೇನೆ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಸಂವಿಧಾನ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಅಂಬೇಡ್ಕರ್ ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಟಿ.ಸತೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರಿಗೂ ಸಮಾನತೆ ಕೊಟ್ಟಿರುವ ವಿಶ್ವದ ಏಕೈಕ ಸಂವಿಧಾನ ನಮ್ಮದು. ಮಹಿಳೆಯರು ಎಲ್ಲ ರಂಗದಲ್ಲೂ ಮುಂದೆ ಬರಲು ಸಾಧ್ಯವಾಗಿರುವುದು ನಮ್ಮ ಸಂವಿಧಾನದ ಕೊಡುಗೆ ಎಂದರು.

ಟೀನ್ ಇಲೆವೆನ್ ತಂಡದ ವ್ಯವಸ್ಥಾಪಕ ಮಣಿ ಕಾಡಂಗಡಿ ಸೇರಿದಂತೆ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು. ಮಾಲ್ದಾರೆ ಶಾಲೆಯ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆ ಓದುವ ಮೂಲಕ ಗಮನ ಸೆಳೆದರು. ಜನಪರ ಸಂಘಟನೆಯ ಅಧ್ಯಕ್ಷ ಭಾವ ಮಾಲ್ದಾರೆ, ಜಿಲ್ಲಾ ಉಪಾಧ್ಯಕ್ಷ ಮಂಜು, ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ದರಾಜು, ವಿರಾಜಪೇಟೆ ತಾಲೂಕು ಸಂಘಟಕ ಅಧ್ಯಕ್ಷ ಅಗಸ್ಟೀನ್, ವಿರಾಜಪೇಟೆ ತಾಲೂಕು ಉಪಾಧ್ಯಕ್ಷ ತಿಮ್ಮಣ್ಣ, ಧನುಕುಮಾರ್, ದೀಪು, ಹರೀಶ್, ಗಣೇಶ್ ಗದ್ದೆಮನೆ, ಅರುಣ್ ಕೆಇಬಿ, ರೇಖಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net