

ಹೊಸಪೇಟೆ: ಮದುವೆ ಹಾಗೂ ಮನೆ ಗೃಹ ಪ್ರವೇಶಕ್ಕೆ ಆಗಮಿಸುವ ಅತಿಥಿ, ನೆಂಟರಿಷ್ಟರಿಗೆ ರಿಟನ್ ಗಿಫ್ಟ್ ನೀಡುವುದು ಸಾಮಾನ್ಯ. ಆದರೆ, ಇಲ್ಲಿನ ಆಕಾಶವಾಣಿ ಬಡಾವಣೆಯಲ್ಲಿ ಗುರುವಾರ ಉಪನ್ಯಾಸಕರೊಬ್ಬರು ಆಯೋಜಿಸಿದ್ದ ತಮ್ಮ ಗೃಹ ಪ್ರವೇಶಕ್ಕೆ ಬಂದಿದ್ದ ನೆಂಟರು, ಸ್ನೇಹಿತರಿಗೆ ಸಂವಿಧಾನ ಪುಸ್ತಕಗಳನ್ನು ಉಡುಗೊರೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಇಲ್ಲಿನ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಉಪನ್ಯಾಸಕ ಡಾ. ಕಿಚಡಿ ಚನ್ನಪ್ಪ ಅವರು ಭಾರತದ ಸಂವಿಧಾನ, ಇಂಗ್ಲೆAಡ್ ಸಂವಿಧಾನ ಮತ್ತು ಸ್ವಿಟ್ಜರ್ಲೆಂಡ್ ಸಂವಿಧಾನದ ಪುಸ್ತಕಗಳನ್ನ ವಿತರಿಸಿದರು. ಸಮಾರಂಭಕ್ಕೆ ಆಗಮಿಸಿದ್ದ ೩೦೦ಕ್ಕೂ ಹೆಚ್ಚು ಜನರಿಗೆ ಸಂವಿಧಾನದ ಪುಸ್ತಕಗಳನ್ನು ವಿತರಿಸಿ, ಸಂವಿಧಾನವನ್ನು ಅಧ್ಯಯನ ಮಾಡಿ, ತಮ್ಮ ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ತಿಳಿ ಹೇಳುವಂತೆ ಮನವಿ ಮಾಡಿದರು.
ಉಪನ್ಯಾಸಕರ ವಿಶೇಷ ಪ್ರಯತ್ನಕ್ಕೆ ಬಂಧುಗಳು ಮೆಚ್ಚುಗೆ ವ್ಯಕ್ತಪಡಿಸಿದರು.