ಸಂವಿಧಾನ ಬಾಬಾಸಾಹೇಬರ ಕೊಡುಗೆ

Constitution Babasaheb's contribution
Constitution Babasaheb's contribution
Published on

ಜಮಖಂಡಿ ಅಂಬೇಡ್ಕರ್‌ರವರು ದೇಶದಲ್ಲಿ ಇರುವ ಕೆಳವರ್ಗದ ಜನರು ಸಹ ಸಮಾನತೆಯಿಂದ ಬದುಕಬೇಕೆಂದು ಸಂವಿಧಾನವನ್ನು ನೀಡಿದ್ದಾರೆ ಎಂದು ಅಂಬೇಡ್ಕರ್ ಅವರ ಮೊಮ್ಮಗ ಡಾ. ರಾಜರತ್ನ ಅಂಬೇಡ್ಕರ್ ಹೇಳಿದರು.

ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದ ಅಂಗವಾಗಿ ಅಂಬೇಡ್ಕರ್ ಹಬ್ಬ ಹಾಗೂ ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಹೆಸರಿನಲ್ಲಿ ತುಳಿತಕ್ಕೆ ಒಳಪಟ್ಟ ಮಕ್ಕಳು ಸಹ ಸುಪ್ರೀಂಕೋರ್ಟ್ ನ್ಯಾಯಾಧೀಶರು, ವಕೀಲರು, ಡಾಕ್ಟರ್, ಇಂಜಿನಿಯರ್‌ಗಳು ಆಗಿದ್ದಾರೆ. ವಿದೇಶದಲ್ಲಿಯೂ ಭಾರತ ಎಂದರೆ ಡಾ. ಬಾಬಾಸಾಹೇಬರ ದೇಶ ಎಂದು ಕೊಂಡಾಡುತ್ತಾರೆ ಎಂದರು.

ಅಂಬೇಡ್ಕರ್ ಅವರು ಯಾವುದೇ ಹಣ, ಆಸ್ತಿ ಆಸೆಗೆ ಒಳಪಡಲಿಲ್ಲ. ಅವರೊಬ್ಬರು ಸಾದಾಸೀದಾ ವ್ಯಕ್ತಿಯಾಗಿದ್ದರು. ಬೌದ್ಧ ಧರ್ಮದಲ್ಲಿ ಎಲ್ಲರೂ ಕೆಲಸ ಮಾಡಬೇಕು. ದೇಶದಲ್ಲಿನ ಮಕ್ಕಳು ವಿದ್ಯಾವಂತರಾಗುವುದು ಅವರ ಕನಸಾಗಿತ್ತು ಎಂದರು.

ಶಾಸಕ ನಾಡೋಜ ಜಗದೀಶ ಗುಡಗುಂಟಿ, ಕುಡಚಿ ಶಾಸಕ ಮಹೇಶ ತಮ್ಮನ್ನವರ, ಮಾಜಿ ಶಾಸಕ ಆನಂದ ನ್ಯಾಮಗೌಡ, ಉದ್ಯಮಿ ತೌಫಿಕ ಪಾರ್ಥನಳ್ಳಿ, ತಾಪಂ ಇಒ ಸಂಜು ಜುನ್ನೂರ ಮಾತನಾಡಿದರು.

ಸಿದ್ದು ಮೀಶಿ, ರಾಹುಲ ಕಲೂತಿ, ಸುಶೀಲಕುಮಾರ ಬೆಳಗಲಿ, ರಿಯಾಜ ತೆಲಸಂಗ, ಈಶ್ವರ ವಾಳೇನ್ನವರ, ನಾಗಪ್ಪ ಸನದಿ, ಅಜಯ ಕಡಪಟ್ಟಿ, ಯಮನೂರ ಮೂಲಂಗಿ ಇದ್ದರು.

ಯಮನಪ್ಪ ಗುಣದಾಳ ಪ್ರಾಸ್ತಾವಿಕ ಮಾತನಾಡಿದರು. ಕರಣಕುಮಾರ ಮೌರ್ಯ, ಮಮತಾ ನದಾಫ್ ನಿರೂಪಿಸಿದರು. ಶಶಿಧರ ಮೀಶಿ, ಪವಣ ಸುತ್ತಾರ ವಂದಿಸಿದರು. ಸಂಜೆ ಅಂಬೇಡ್ಕರ್ ಮೂರ್ತಿಯ ಭವ್ಯ ಮೆರವಣಿಗೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net