ಸ್ಕೇಟಿಂಗ್​ ಮೂಲಕ ಸಂವಿಧಾನ ಜಾಗೃತಿ

18 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪುಟಾಣಿ ಮಕ್ಕಳು ನಗರದಲ್ಲಿ ಭಾನುವಾರ ಸ್ಕೇಟಿಂಗ್​ ರ್ಯಾಲಿ ಮೂಲಕ ಸಂವಿಧಾನ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಸಂವಿಧಾನದ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಸ್ಕೇಟಿಂಗ್​ ತರಬೇತುದಾರ ಶಶಿಧರ ಪಾಟೀಲ ನೇತೃತ್ವದಲ್ಲಿ ಧಾರವಾಡದ ರೋಲರ್​ ಸ್ಕೇಟಿಂಗ್​ ಅಕಾಡೆಮಿಯ 4 ರಿಂದ 12 ವರ್ಷದ 25ಕ್ಕೂ ಹೆಚ್ಚು ಸ್ಕೇರ್ಟಸ್​ಗಳು ಇಲ್ಲಿನ ಕರ್ನಾಟಕ ಕಾಲೇಜು ವೃತ್ತದಿಂದ ಜುಬಿಲಿ ವೃತ್ತದ ಡಾ. ಬಿ.ಆರ್​. ಅಂಬೇಡ್ಕರ್​ ಪುತ್ಥಳಿ ವರೆಗೂ ಸಂವಿಧಾನ ಜಾಗೃತಿ ಫಲಕಗಳನ್ನು ಹಿಡಿದು ಸ್ಕೇಟಿಂಗ್​ ಮೂಲಕ ಜಾಗೃತಿ ಮೂಡಿಸಿದರು. ಬಳಿಕ ಅಂಬೇಡ್ಕರ್​ ಪುತ್ಥಳಿ ಎದುರು ಮಕ್ಕಳು ಸಂವಿಧಾನ ಪೀಠಿಕೆ ಓದಿದರು.
ಕೆಸಿಡಿ ವೃತ್ತ ಬಳಿ ರ್ಯಾಲಿಗೆ ಚಾಲನೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಅಲ್ಲಾಭಕ್ಷ ಎಂ.ಎಸ್​. ಮಾತನಾಡಿ, ಭಾರತದ ಸಂವಿಧಾನ ರಚನೆಯಾಗಿ 75ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಸಂವಿಧಾನದ ಜಾಗೃತಿ ಮಾಡಲಾಗುತ್ತಿದೆ. ಈಗಾಗಲೇ ಧಾರವಾಡದಲ್ಲಿ ವಿವಿಧ ಬಗೆಯ ಜಾಥಾಗಳು ನಡೆಸಲಾಗಿದೆ. ಆದರೆ ರಾಜ್ಯದಲ್ಲೇ ಮೊದಲ ಬಾರಿಗೆ ಸ್ಕೇಟಿಂಗ್​ ಮೂಲಕ ಮಕ್ಕಳು ಜಾಗೃತಿ ಮೂಡಿಸಿದ್ದು ವಿಶೇಷ ಎಂದರು.
ಪಾಲಿಕೆ ಸದಸ್ಯ ಸುರೇಶ ಬೇದರೆ, ವಿದ್ಯಾಥಿರ್ಗಳು, ಪಾಲಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net