ವಿದ್ಯಾರ್ಥಿಗಳಿಂದ ಸಂವಿಧಾನ ಜಾಗೃತಿ ಜಾಥಾ

ವಿದ್ಯಾರ್ಥಿಗಳಿಂದ ಸಂವಿಧಾನ ಜಾಗೃತಿ ಜಾಥಾ
Published on

ನಂಜನಗೂಡು: ತಾಲೂಕಿನ ಸಿಂಧುವಳ್ಳಿ ಗ್ರಾಮದ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಸಂವಿಧಾನ ಜಾಗೃತಿ ಜಾಥಾ ನಡೆಸಿದರು.

ಅಂಬೇಡ್ಕರ್ ಅವರ ಸ್ಫೂರ್ತಿದಾಯಕ ಘೋಷವಾಕ್ಯಗಳನ್ನು ಸಾರುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಎಸ್. ಸಿದ್ದರಾಜು ಮಾತನಾಡಿ, ಸಂವಿಧಾನ ಜಾರಿಗೆ ಬಂದು 75 ವರ್ಷ ಕಳೆದರೂ ಇನ್ನು ಹಲವು ಕಡೆ ಮೂಢನಂಬಿಕೆ, ಅಸ್ಪಶ್ಯತೆ ಆಚರಣೆಯಲ್ಲಿರುವುದು ದುರದೃಷ್ಟಕರ. ಸಮಾನತೆ ಸಂವಿಧಾನದ ಧ್ಯೇಯವಾಗಿದ್ದು ಸಮಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಸಹಕರಿಸಬೇಕು ಎಂದರು.

ಸಿಂಧುವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯಪಾಲಕ ಎನ್.ಎಸ್.ನಾಗೇಶ್, ಶಿಕ್ಷಕ ಲೋಕೇಶ್, ಕುಮಾರ್, ದಿವ್ಯಾ, ದ್ರಾಕ್ಷಾಯಿಣಿ, ಅರುಣರಾಜ್, ಚಂದ್ರಿಕಾ, ಸಂಪೂರ್ಣ, ಭಾಗ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net