

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನೇತೃತ್ವದಲ್ಲಿ ನಗರದಲ್ಲಿ ಸಂವಿಧಾನ ಜಾಗೃತಿ ಜಾಥಾ ಹಾಗೂ ಬೈಕ್ ರ‌್ಯಾಲಿ ಬುಧವಾರ ಜರುಗಿತು.
ಸಾಂವಿಧಾನಿಕ ಉಲ್ಲೇಖಗಳು ಮತ್ತು ಸಂದೇಶಗಳನ್ನು ಹೊಂದಿರುವ ಫಲಕಗಳನ್ನು ಹೊತ್ತ ಬೈಕ್‌ಗಳಲ್ಲಿ ಮೂರುಸಾವಿರ ಮಠ ತಲುಪಿ, ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಕೊಪ್ಪಿಕರ ರಸ್ತೆ ಮೂಲಕ ಚನ್ನಮ್ಮ ವೃತ್ತ ತಲುಪಿತು. ಲ್ಯಾಮಿಂಗ್ಟನ್ ರಸ್ತೆ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ವೃತ್ತ ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಎತ್ತಿಹಿಡಿಯುವುದು ಮತ್ತು ನಾಗರಿಕರ ಜವಾಬ್ದಾರಿಯ ಭಾವವನ್ನು ಹುಟ್ಟುಹಾಕುವ ಗುರಿಯೊಂದಿಗೆ ಬೈಕ್ ರ‌್ಯಾಲಿ ಅಂತಿಮಗೊಳಿಸಲಾಯಿತು.
ಕರ್ನಾಟಕ ಕಾಲೇಜ್ ಆಫ್ ಧಾರವಾಡ ಪ್ರಾಧ್ಯಾಪಕ ಡಾ.ಎಂ.ಬಿ. ದಳಪತಿ ಮಾತನಾಡಿ, ನಾಗರಿಕರಲ್ಲಿ ಸಂವಿಧಾನ ಜಾಗೃತಿ ಮೂಡಿಸುವುದು ಮುಖ್ಯ. ಪ್ರತಿಯೊಬ್ಬರೂ ನಮ್ಮ ಸಂವಿಧಾನದ ಹಕ್ಕಿನ ಬಗ್ಗೆ ಅರಿವು ಹೊಂದಬೇಕು ಎಂದರು.
ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ, ಗೌರವ ಕಾರ್ಯದರ್ಶಿಗಳಾದ ರವೀಂದ್ರ ಬಳಿಗಾರ, ಮಹೇಂದ್ರ ಸಿಂಘಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ , ಉಪನಿರ್ದೇಶಕ ಭೀಮಪ್ಪ, ಸಹಾಯ ನಿರ್ದೇಶಕ ಶಿವಾನಂದ ಹೊಸಮನಿ, ವಿಜಯ ಭಾರತಿ, ಸಿ.ವಿ. ಬಳಿಗಾರ, ಆರ್.ಜಿ. ಭಟ್, ವಿನಾಯಕ ಮಠದ, ಶಾಂತರಾಜ ಪೋಳ, ಪಿ.ಡಿ. ಬನಸಾಲಿ, ಬ್ರಹ್ಮಕುಮಾರ ಬೀಳಗಿ, ಸದಾನಂದ ಕಾಮತ, ಜಿನದತ್ ಓಸ್ತವಾಲ, ಸಿ.ಎನ್. ಕರಿಕಟ್ಟಿ, ದಯಾನಂದ ಮಗಜಿಕೊಂಡಿ ಇತರರು ಇದ್ದರು.