ಸಂವಿಧಾನ ಜಾಗೃತಿ ಜಾಥಾ

h20-sanvidan jata
Published on

ಹುಬ್ಬಳ್ಳಿ: ನವಲಗುಂದ ತಾಲೂಕಿನ ಗುಮ್ಮಗೋಳ, ಶಿರೂರ, ಮೊರಬ, ಶಿರಕೋಳ, ತಿರ್ಲಾಪುರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಬೃಹತ್ ಮೆರವಣಿಗೆ ಮಂಗಳವಾರ ಏರ್ಪಡಿಸಲಾಗಿತ್ತು.
ಗ್ರಾಮಸ್ಥರು ಜಾಗೃತಿ ಜಾಥಾ ವಾಹನಕ್ಕೆ ಆರತಿ ಬೆಳಗಿಸುವುದರ ಮೂಲಕ ಸ್ವಾಗತಿಸಿದರು. ಡಾ.ಎಸ್.ಬಿ. ಸುಗಂದಿ ಅವರು ಸಂವಿಧಾನದ ಮಹತ್ವ, ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು.
ಸಂವಿಧಾನ ಜಾಗೃತಿ ಜಾಥಾ ನಿಮಿತ್ತ ಆಯೋಜಿಸಿದ್ದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಿತ್ತೂರು ರಾಣಿ ಚನ್ನಮ್ಮನ ಕುರಿತಾದ ಕಿರು ನಾಟಕ ನೋಡುಗರ ಗಮನಸೆಳೆಯಿತು.
ಕಲಾವಿದೆ ಚನ್ನವ್ವ ದಾನಸೂರ ಅವರು ಹಾಡುಗಳನ್ನು ಹಾಡಿದರು. ವಿದ್ಯಾರ್ಥಿಗಳ ಆಕರ್ಷಕ ಕೋಲಾಟ, ಲೇಜಿಮ್, ನೃತ್ಯ, ಹಾಡುಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಮಹಿಳೆಯರ ಡೊಳ್ಳು ಕುಣಿತ, ಕುಂಭಮೇಳ, ಸೇವಾದಳ, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣನವರ ಅವರ ಭಾವಚಿತ್ರದ ಮೆರವಣಿಗೆಯು ಎಲ್ಲರ ಗಮನ ಸೆಳೆಯಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕಫೀಲಾ ಏಲೂವಗಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net