ಸಂವಿಧಾನ ಎಲ್ಲರಿಗೂ ಮೀಸಲಾತಿ ಕಲ್ಪಿಸಿದೆ

samvidana
Constitution Awareness Jatha
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ದೇಶದಲ್ಲಿ ಪರಿಶಿಷ್ಟರಿಗೆ ಮಾತ್ರ ಮೀಸಲಾತಿ ಇದೆ ಎನ್ನುವ ತಪ್ಪುಕಲ್ಪನೆ ಸಾಮಾನ್ಯ ಜನರಲ್ಲಿದ್ದು, ಎಲ್ಲರಿಗೂ ಸಂವಿಧಾನ ಮೀಸಲಾತಿ ಕಲ್ಪಿಸಿದೆ ಎಂಬುವುದನ್ನು ಅರಿಯಬೇಕಿದೆ ಎಂದು ಕರ್ನಾಟಕ ಸಮತಾ ಸೈನಿಕ ದಳ ಅಧ್ಯಕ್ಷ ಬಿ.ಚನ್ನಕೃಷ್ಣಪ್ಪ ಹೇಳಿದರು.
ತಾಲೂಕಿನ ಮುಗಬಾಳದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತ ಜಾಥಾದಲ್ಲಿ ಮಾತನಾಡಿ,
ಭಾರತದ ಸಂವಿಧಾನ ಜಗತ್ತಿನಲ್ಲೇ ಅತ್ಯತ್ತಮ ಶ್ರೇಷ್ಠ ಸಂವಿಧಾನವಾಗಿದ್ದು, ಅಂಬೇಡ್ಕರ್ ಅವರು 2 ವರ್ಷ 11 ತಿಂಗಳು 17 ದಿನಗಳ ಕಾಲ ಪ್ರಪಂಚದ ಎಲ್ಲ ಸಂವಿಧಾನಗಳನ್ನು ಅಧ್ಯಯನ ಮಾಡಿ, ಅದರಲ್ಲಿ ಅತ್ಯುತ್ತಮ ಅಂಶಗಳನ್ನು ತೆಗದುಕೊಂಡು, ಲಿಖಿತ ಸಂವಿಧಾನ ಬರೆದು ನಮಗೆ ಅರ್ಪಿಸಿದ್ದಾರೆ.
ಇದನ್ನು ನೋಡಿ, ಇತರೆ ದೇಶಗಳು ನಮ್ಮ ಸಂವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಇದು ಒಂದು ಶೇಷ್ಠವಾದ ಗ್ರಂಥ. ಅವರು ಆಡಳಿತ ಮತ್ತು ಕುಟುಂಬಕ್ಕೆ ಅಂಟಿಕೊಂಡವರಲ್ಲ. ಆಸೆ ಮತ್ತು ಆಮಿಷಕ್ಕೆ ಬಲಿಯಾದವರಲ್ಲ. ಆಯಾ ಜಾತಿಗಳಿಗೆ ಅನುಗುಣವಾಗಿ ಮೀಸಲಾತಿ ಕೊಟ್ಟಿದ್ದಾರೆ. ದೇಶದ ಎಸ್.ಸಿ, ಎಸ್ಟಿಗಳಿಗೆ ಶೇ.18 ಮೀಸಲಾತಿ ನೀಡಿದರೆ, ಇತರೆ ಹಿಂದುಳಿದ ವರ್ಗದವರಿಗೆ ಶೇ.32 ಮೀಸಲಾತಿ ನೀಡಿದ್ದು, ಅದನ್ನು ಎಲ್ಲ ಜಾತಿಯ ಮಹಿಳೆಯರು ಮರೆಯಬಾರದು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು, ಕಾಳಪನಹಳ್ಳಿ ಶಿವಕುಮಾರ್, ನೋಡಲ್ ಅಧಿಕಾರಿ ಯತೀಂದ್ರ, ಮಾತನಾಡಿದರು. ಗ್ರಾಪಂ ಪಿಡಿಒ ಶಂಕರಮ್ಮ ಲಘುಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net