ಫ್ಲ್ಯಾಷ್‌ಮಾಬ್ ನೃತ್ಯದೊಂದಿಗೆ ಸಂವಿಧಾನದ ಜಾಗೃತಿ: ನಗರದಲ್ಲಿ ಗಮನಸೆಳೆದ ಚಟುವಟಿಕೆ

Flashmob dancing Constitution awareness mandya
Published on

ಮಂಡ್ಯ: ಸಂವಿಧಾನ ರಚನೆಯಾಗಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆಯೋಜಿಸಿರುವ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ನಗರದಲ್ಲಿ ಫ್ಲ್ಯಾಷ್‌ಮಾಬ್ ನೃತ್ಯ ನಡೆಸಲಾಯಿತು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನಡೆದ ಫ್ಲ್ಯಾಷ್‌ಮಾಬ್ ನೃತ್ಯದ ಮೂಲಕ ಸಂವಿಧಾನದ ಮಹತ್ವ, ಹಕ್ಕು ಮತ್ತು ಸ್ವಾತಂತ್ರ್ಯ, ಅಧಿಕಾರ ಮತ್ತು ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕತಿಕ, ಶೈಕ್ಷಣಿಕ ಮತ್ತು ಸರ್ವಾಂಗೀಣ ಅಭಿವೃದ್ಧಿ ಎಂಬ ಸಂದೇಶವನ್ನು ತಿಳಿಸಲಾಯಿತು. ಅಂತೆಯೇ ನೃತ್ಯದ ಮೂಲಕ ಸಂವಿಧಾನ ಕುರಿತು ಅರಿವು ಮೂಡಿಸಲಾಯಿತು. ಸಂವಿಧಾನದ ಆಶಯಗಳ ಕುರಿತಾದ ಭಿತ್ತಿಪತ್ರಗಳ ಪ್ರದರ್ಶನ ಮಾಡಲಾಯಿತು. ವಿಭಿನ್ನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net