ಸಂವಿಧಾನ ಜಾಗೃತಿ ರಥಕ್ಕೆ ಚಾಲನೆ ಇಂದು

Published on

ಹೊಳೆನರಸೀಪುರ: ಸಂವಿಧಾನ ಜಾರಿಯಾದ 75ನೇ ವರ್ಷದ ಸವಿನೆನಪಿಗಾಗಿ ಸಂವಿಧಾನ ಜಾಗೃತಿರಥ ಜಿಲ್ಲಾದ್ಯಂತ ಸಂಚರಿಸಲಿದೆ. ಸಾರ್ವಜನಿಕರು, ಜನಪ್ರತಿನಿಧಿಗಳು ಈ ರಥವನ್ನು ಸ್ವಾಗತಿಸಿ ಸಂವಿಧಾನದ ಬಗ್ಗೆ ನೀಡುವ ಉಪನ್ಯಾಸವನ್ನು ಕೇಳಿ ತಿಳಿದುಕೊಳ್ಳಿ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಈ ರಥಕ್ಕೆ ಜ.26 ರಂದು ಜಿಲ್ಲಾ ಕೇಂದ್ರದಲ್ಲಿ ಚಾಲನೆ ನೀಡಲಿದ್ದಾರೆ. ಜಿಲ್ಲೆಯಲ್ಲಿ ಎರಡು ರಥಗಳು ಸಂಚರಿಸಲಿವೆ. ಫೆ. 2, 3, 4 ರಂದು ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಥ ಸಂಚರಿಸಲಿದೆ. ಆಶಾ ಕಾಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಈ ರಥವನ್ನು ಗೌರವದಿಂದ ಬರಮಾಡಿಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಪಂ ಇಒ ಗೋಪಾಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೌಸರ್ ಅಹಮದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net