ಕೊಡ್ಲಿಪೇಟೆಯಲ್ಲಿ ಸಂವಿಧಾನ ಶಿಲ್ಪಿ ಸ್ಮರಣೆ

DALITHA 2
Published on

ಶನಿವಾರಸಂತೆ: ದಲಿತ ಸಂಘಟನೆಗಳ ವತಿಯಿಂದ ಸಮೀಪದ ಕೊಡ್ಲಿಪೇಟೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯಿತು.


ಕೊಡ್ಲಿಪೇಟೆಯ ಬಸ್ ನಿಲ್ದಾಣದಲ್ಲಿ ಡಾ.ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಉದ್ದೇಶಿತ ಸ್ಥಳದಲ್ಲಿ ದಲಿತ ಸಂಘಟನೆಗಳ ಪದಾಧಿಕಾರಿಗಳು, ದಲಿತ ಬಂಧುಗಳು ಹಾಗೂ ಸಾರ್ವಜನಿಕರು ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪುಷ್ಪ ನಮನ ಸಲ್ಲಿಸಿದರು.


ದಲಿತ ಸಂಘಟನೆಯ ಮುಖಂಡ ಜೆ.ಎಲ್.ಜನಾರ್ದನ ಮಾತನಾಡಿ, ಡಾ.ಅಂಬೇಡ್ಕರ್ ಅವರ ಆದರ್ಶ ಇಡೀ ವಿಶ್ವಕ್ಕೇ ಮಾದರಿ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದ ಅವರು ಸಂವಿಧಾನ ರಚನೆಯ ಮೂಲಕ ದೇಶಕ್ಕೆ ಸಮಾನತೆಯ ಪಾಠ ಹೇಳಿದರು ಎಂದರು.

ಸಂಘಟನೆಯ ಪ್ರಮುಖರಾದ ಡಿ.ಸಿ. ಸೋಮಣ್ಣ, ವೀರಭದ್ರ, ಕೇಶವ, ಡಿ.ಬಿ.ವಿಜಯ, ಕೆ.ಎನ್.ಇಂದ್ರೇಶ್, ದಯಾನಂದ, ವಸಂತ್, ಸತ್ಯಪ್ರಕಾಶ್, ದೇವರಾಜ್, ನಟೇಶ್, ಹೇಮಂತ್, ಗೋವಿಂದ, ಡಿ.ಎಸ್.ವಸಂತ, ಗೌತಮ್, ವಿಜಯ್, ಮಂಜುನಾಥ್ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net