ಸಂವಿಧಾನ ವಿರೋಧಿ ಚಟುವಟಿಕೆ ಹೆಚ್ಚಳ

26 DVD 03
ದೇವದುರ್ಗ ತಾಲೂಕು ಸೋಮನಮರಡಿ ಗ್ರಾಮದಲ್ಲಿ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಜರುಗಿತು. ತಾಪಂ ಕೆಡಿಪಿ ಸದಸ್ಯ ಶಿವಪ್ಪ ಪಲಕನಮರಡಿ, ಗ್ರಾಪಂ ಅಧ್ಯಕ್ಷೆ ಈರಮ್ಮ ಕರಿಯಪ್ಪ, ಪಿಡಿಒ ಚನ್ನಬಸವ ಗಣೇಕಲ್, ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ, ಮುಖ್ಯಶಿಕ್ಷಕ ಉಮೇಶ್ ರಾಠೋಡ್, ಬಸವರಾಜ ಬ್ಯಾಗವಾಟ್ ಇತರರಿದ್ದರು.
Published on

ದೇವದುರ್ಗ: ದೇಶದಲ್ಲಿ ದಿನೇದಿನೆ ಸಂವಿಧಾನ ವಿರೋಧಿ ಚಟುವಟಿಕೆಗಳು ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಅಂಥ ದೃಷ್ಟ ಶಕ್ತಿಗಳನ್ನು ದೇಶದ ಜನರು ಒಗ್ಗಟ್ಟಾಗಿ ಹೊಡೆದೋಡಿಸಬೇಕಿದೆ ಎಂದು ತಾಪಂ ಕೆಡಿಪಿ ಸದಸ್ಯ ಶಿವಪ್ಪ ಪಲಕನಮರಡಿ ಹೇಳಿದರು.

ತಾಲೂಕಿನ ಸೋಮನಮರಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಸಂವಿಧಾನ ಅರ್ಥೈಸಿಕೊಂಡರೆ ಬಾಬಾ ಅಂಬೇಡ್ಕರ್ ಅರ್ಥವಾಗುತ್ತಾರೆ. ಅಂಬೇಡ್ಕರ್ ಬಗ್ಗೆ ಬ್ರಿಟಿಷರಿಗೆ ಅರ್ಥವಾದಷ್ಟು ಭಾರತೀಯ ನಾಯಕರಿಗೆ ಅರ್ಥವಾಗದೇ ಇರುವುದು ದುರಂತ.

ಇಂದು ಸಂವಿಧಾನದ ಬಗ್ಗೆ, ದೇಶದ ಬಗ್ಗೆ ಹಾಗೂ ಸೈನಿಕರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಲಾಗುತ್ತಿದೆ. ಇಂಥ ನಡೆಗಳನ್ನು ಸಂವಿಧಾನ ವಿರೋಧಿ ಹಾಗೂ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನುಕ್ರಮ ಜರುಗಿಸಬೇಕು. ನಾಡುನುಡಿ, ದೇಶ, ಸಂವಿಧಾನ ಉಳಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಒಕ್ಕೂಟದ ಸಂಚಾಲಕ ಬಸವರಾಜ ಬ್ಯಾಗವಾಟ್ ಮಾತನಾಡಿದರು.

ಶಿಕ್ಷಕ ನಾಗರಾಜ ಪೂಜಾರಿ, ಅರಕೇರಾ ದುರ್ಗಪ್ಪ, ನೀಲನಗೌಡ ಮೇಟಿ, ದೇವರಾಜ ಪೂಜಾರಿ, ಮಂಜುನಾಥ, ಶ್ರೀಮಂತ, ಹನುಮಂತ, ರತ್ನಾ, ವೆಂಕಟರಾವ್, ಶಿಕ್ಷಕ ನಾಗರಾಜ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net