ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ

udp-3-election 2
Published on

ಉಡುಪಿ: ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಸೋಮವಾರ ನಡೆದಿದ್ದು, ಜಿಲ್ಲೆಯಲ್ಲಿ ಶೇ.80.75ರಷ್ಟು ಶಿಕ್ಷಕರು, ಶೇ.74.17ರಷ್ಟು ಪದವೀಧರ ಮತದಾರರು ಮತ ಚಲಾಯಿಸಿದ್ದಾರೆ.

ಜಿಲ್ಲೆಯಲ್ಲಿ 4067 ಮಂದಿ ಶಿಕ್ಷಕರು ನೋಂದಾಯಿಸಿಕೊಂಡಿದ್ದು, 3284 ಮಂದಿ ಮತ ಹಾಕಿದ್ದಾರೆ. 17,033 ಮಂದಿ ಪದವೀಧರರು ನೋಂದಾಯಿಸಿಕೊಂಡಿದ್ದು, 12633 ಮಂದಿ ಮತ ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ನಡೆದಿದ್ದು, ಮತದಾರರು ಹೆಚ್ಚಿನ ಸಂಖೆಯಲ್ಲಿ ಮತಗಟ್ಟೆ ಕೇಂದ್ರಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಬೈಂದೂರಿನಲ್ಲಿ 1, ಕುಂದಾಪುರದಲ್ಲಿ 2, ಬ್ರಹ್ಮಾವರ 1, ಉಡುಪಿ 2, ಕಾಪು 1, ಕಾರ್ಕಳ 2, ಹೆಬ್ರಿಯಲ್ಲಿ 1 ಮತಗಟ್ಟೆಗಳನ್ನು ತೆರೆಯಲಾಗಿತ್ತು.

ಹೊಸ ನೋಂದಣಿ ಮಾಡದೆ ವಾಪಾಸು
5 ವರ್ಷದ ಹಿಂದೆ ಪದವೀಧರ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಂಡಿದ್ದ ಅನೇಕ ಮಂದಿ ನಿಯಮ ಪ್ರಕಾರ ಈ ವರ್ಷ ಹೊಸ ನೋಂದಣಿ ಮಾಡಿಕೊಳ್ಳದೆ ಮತದಾನದಿಂದ ವಂಚಿತರಾಗಿದ್ದಾರೆ. ವೋಟರ್​ ಐಡಿಯೊಂದಿಗೆ ಮತಗಟ್ಟೆಗೆ ಆಗಮಿಸಿದರೂ ಸೀರಿಯಲ್​ ನಂಬರ್​ ಸಿಗದೆ ಮುನಿಸಿಕೊಂಡು ವಾಪಾಸು ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net