ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಯೋಜನೆ

25Kittur1
ಚನ್ನಾಪುರ-ಗಿರಿಯಾಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು. ಸುರೇಶ ಜೋರಾಪುರ, ಅಷ್ಪಾಕ್ ಹವಾಲ್ದಾರ, ಚಂದ್ರಗೌಡ ಪಾಟೀಲ, ಸುನೀಲ ಗಿವಾರಿ, ಕಿರಣ ವಾಲಿಕಾರ, ಸುಭಾಷ ಹಂಚಿನಮನಿ ಇತರರಿದ್ದರು.
Published on

ಚನ್ನಮ್ಮ ಕಿತ್ತೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಸಮೀಪದ ಚನ್ನಾಪುರ-ಗಿರಿಯಾಲ ಗ್ರಾಮಸ್ಥರಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಗ್ರಾಮ ಚಿಕ್ಕದಾದರೂ ಸಾಕಷ್ಟು ಸಮಸ್ಯೆಗಳಿವೆ. ಎಲ್ಲವನ್ನೂ ಕ್ರಮೇಣವಾಗಿ ಸರಿಪಡಿಸೋಣ. ಅವಶ್ಯವಿರುವ ಕೆಲಸಗಳಿಗೆ ಆದ್ಯತೆ ನೀಡೋಣ ಎಂದರು.

ತಾಪಂ ಮಾಜಿ ಅಧ್ಯಕ್ಷ ಬಸವರಾಜ ಸಂಗೊಳ್ಳಿ ಮಾತನಾಡಿ, ಜನ ಸಂಚಾರಕ್ಕೆ ಹೆದ್ದಾರಿಗೆ ಅಂಡರ್ ಪಾಸ್ ಬ್ರಿಡ್ಜ್ ನಿರ್ಮಿಸಬೇಕು ಗ್ರಾಮಸ್ಥರ ಬಹುದಿನದ ಬೇಡಿಕೆ. ಸಮಸ್ಯೆ ಶೀಘ್ರ ಪರಿಹರಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ಸುರೇಶ ಜೋರಾಪುರ, ಅಷ್ಪಾಕ್ ಹವಾಲ್ದಾರ, ಚಂದ್ರಗೌಡ ಪಾಟೀಲ, ಸುನೀಲ ಗಿವಾರಿ , ಕಿರಣ ವಾಲಿಕಾರ, ಸುಭಾಷ ಹಂಚಿನಮನಿ, ಅನಿಲ ಎಮ್ಮಿ, ಸುರೇಶ ಕಿತ್ತೂರ, ಪ್ರೇಮಕುಮಾರ ಹಂಚಿನಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net