ಮತಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

07 SAMABARGI 01-Web
ಬಾಂದಾರ ನಿರ್ಮಾಣ ಕಾಮಗಾರಿಗೆ ಸಚಿವ ಶ್ರೀಮಂತ ಪಾಟೀಲ ಚಾಲನೆ ನೀಡಿದರು. ಆರ್.ಎಂ.ಪಾಟೀಲ ಇತರರು ಇದ್ದರು.
Published on

ಸಂಬರಗಿ: ಮತಕ್ಷೇತ್ರದಲ್ಲಿ ಕೋಟ್ಯಂತರ ರೂ. ಅನುದಾನ ಖರ್ಚು ಮಾಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಿನ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಜವಳಿ ಹಾಗೂ ಅಲ್ಪಸಂಖ್ಯಾತ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ. ಗ್ರಾಮದ ಮೂಲಕ ಹಾದುಹೋಗಿರುವ ನಾಗನೂರ-ಸಂಬರಗಿ ಸಂಪರ್ಕ ರಸ್ತೆಯ ಬ್ರಿಡ್ಜ್ ಕಂ ಬಾಂದಾರ ಹಾಗೂ ಲಾಂಡಗೆ ತೋಟದ ವಸತಿಯಲ್ಲಿ ಬಾಂದಾರ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಹಾದೇವ ಕೋರೆ, ಆರ್.ಎಂ.ಪಾಟೀಲ, ಶಿವಾಜಿ ಸಾತಪೂತೆ, ಅಣ್ಣಾಸಾಹೇಬ ಮಿಸಾಳ, ರಾಮ ಸೊಡ್ಡಿ, ಲಕ್ಷ್ಮಣ ಟೋನೆ, ಅಬ್ದುಲ್ ಮುಲ್ಲಾ, ವಿಶ್ವನಾಥ ದೇವಮಾನೆ, ಎಚ್.ಬಿ.ದಳವಾಯಿ, ಬಸಗೌಡ ಪಾಟೀಲ, ಅಶೋಕ ಮಾನೆ, ಶ್ರೀಕಾಂತ ಮಾಕಾನಿ, ಸಂಭಾಜಿ ವಾಯಪಡೆ ಇತರರಿದ್ದರು.

ಬೆಳಗಾವಿ ಉಸ್ತುವಾರಿ ಸ್ಥಾನದ ಆಕಾಂಕ್ಷಿ ನಾನಲ್ಲ. ಪಕ್ಷದ ವರಿಷ್ಠರು ಉಸ್ತುವಾರಿ ಜವಾಬ್ದಾರಿ ನೀಡಿದರೆ ಸ್ವೀಕರಿಸುವೆ. ಇಲಾಖೆಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.| ಶ್ರೀಮಂತ ಪಾಟೀಲ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net