ನಿರಂತರ ಓದು ಸಾಧನೆಗೇರುವ ಸಾಧನ

25CKD2.jpg
Published on

ಚಿಕ್ಕೋಡಿ: ವಿದ್ಯಾರ್ಥಿಗಳು ಓದಿನತ್ತ ಗಮನ ಕೊಟ್ಟು ತಂದೆ-ತಾಯಿಗಳ ಪರಿಶ್ರಮ ಸಾರ್ಥಕಗೊಳಿಸಲು ಅತ್ಯುತ್ತಮ ಸಾಧನೆ ಮಾಡಬೇಕೆಂದು ಅಂಕಲಿ ಪೊಲೀಸ್ ಠಾಣೆಯ ಪಿಎಸ್‌ಐ ಕೆ.ಬಿ. ಜಕ್ಕಣ್ಣವರ ಹೇಳಿದರು.

ಚಿಕ್ಕೋಡಿ ತಾಲೂಕಿನ ಅಂಕಲಿಯ ಶಾರದಾದೇವಿ ಕೋರೆ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಿಎಸ್‌ಐ ಕೆ.ಬಿ. ಜಕ್ಕಣ್ಣವರ ಮಾತನಾಡಿದರು. ಆರ್.ಸಿ. ಪಾಟೀಲ, ಬಿ.ಎಸ್. ಅಂಬಿ, ಡಾ. ಸುಬ್ರಾವ ಎಂಟೆತ್ತಿನವರ ಇದ್ದರು.
ಚಿಕ್ಕೋಡಿ ತಾಲೂಕಿನ ಅಂಕಲಿಯ ಶಾರದಾದೇವಿ ಕೋರೆ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಿಎಸ್‌ಐ ಕೆ.ಬಿ. ಜಕ್ಕಣ್ಣವರ ಮಾತನಾಡಿದರು. ಆರ್.ಸಿ. ಪಾಟೀಲ, ಬಿ.ಎಸ್. ಅಂಬಿ, ಡಾ. ಸುಬ್ರಾವ ಎಂಟೆತ್ತಿನವರ ಇದ್ದರು.

ಅಂಕಲಿ ಗ್ರಾಮದ ಶಾರದಾದೇವಿ ಕೋರೆ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಪೋಕ್ಸೋ ಕಾಯ್ದೆ ಅರಿವು ಮೂಡಿಸುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಚುಡಾಯಿಸುವುದು, ಕೆಟ್ಟದಷ್ಟಿಯಲ್ಲಿ ನೋಡುವುದು, ಅಶ್ಲೀಲ ಪದ ಬಳಕೆ ಮಾಡಿದರೆ ಪೋಕ್ಸೋ ಕಾಯ್ದೆಯಲ್ಲಿ ಬಂಸಲಾಗುವುದು. ಹತ್ತು ವರ್ಷಗಳ ಕಾಲ ಅಥವಾ ಆಜೀವಪರ‌್ಯಂತ ಜೆಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.

ಕೆಟ್ಟ ನಡವಳಿಕೆಯಿಂದ ಸರ್ಕಾರಿ ನೌಕರಿ ಸಿಗುವುದಿಲ್ಲ. ಸಹಪಾಠಿಗಳಾದ ವಿದ್ಯಾರ್ಥಿನಿಯರನ್ನು ಸಹೋದರಿ ಭಾವನೆಯಿಂದ ಕಂಡು ಓದಿನಲ್ಲಿ ತೊಡಗಿಕೊಂಡರೆ ಅತ್ಯುತ್ತಮ ಸಾಧನೆ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್.ಸಿ. ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸತತ ಓದುವುದರೊಂದಿಗೆ ಸತ್ಯ ನಿಷ್ಠೆ, ಪ್ರಾಮಾಣಿಕತೆಯಿಂದ ಇರುವುದನ್ನು ರೂಢಿಸಿಕೊಳ್ಳಬೇಕೆಂದರು.

ಸಂಸ್ಥೆಯ ಆಜೀವ ಸದಸ್ಯ ಬಿ.ಎಸ್. ಅಂಬಿ ಇದ್ದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ. ಸುಬ್ರಾವ ಎಂಟೆತ್ತಿನವರ ಸ್ವಾಗತಿಸಿದರು. ಕೆ.ಎಸ್. ಗುಡೋಡಗಿ ನಿರೂಪಿಸಿದರು. ಪಿ.ಎನ್. ತಳವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net