

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕಾರ್ಕಳದಿಂದ ನಕ್ರೆ ಗ್ರಾಮಕ್ಕೆ ಸಂಪರ್ಕಿಸುವ ಹಳೆಯದಾದ ಕಿರು ಸೇತುವೆಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ತಿರುವು ರಸ್ತೆಯಲ್ಲಿ ಈ ಕಿರು ಸೇತುವೆ ಇದ್ದು, ನೂತನ ಸೇತುವೆ ನಿರ್ವಾಣ ಮಾಡಬೇಕೆಂಬುದು ಈ ಭಾಗದ ಗ್ರಾಮಸ್ಥರ ಆಗ್ರಹ.
ನಕ್ರೆ ಪರಪು ಬಳಿ ಇರುವ ಈ ಕಿರು ಸೇತುವೆ ಹಲವು ವರ್ಷಗಳ ಹಿಂದೆ ನಿರ್ವಾಣವಾಗಿದ್ದು, ಇದೀಗ ವಾಹನದ ದಟ್ಟನೆ ಹೆಚ್ಚಾಗುತ್ತಿದ್ದಂತೆ ಕಿರು ಸೇತುವೆಯಲ್ಲಿ ಸಂಚರಿಸುವುದು ಸವಾಲಾಗಿದ್ದು, ಅಪಘಾತಕ್ಕೂ ಕಾರಣವಾಗುತ್ತಿದೆ. ಇಲ್ಲಿ ನೂತನ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ.
ಈ ರಸ್ತೆಯಲ್ಲಿ ನಿತ್ಯ ಸಾವಿರಾರು ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು, ಶಾಲಾ ಬಸ್‌ಗಳು ಹಾಗೂ ಸರಕು ಸಾಗಣೆ ವಾಹನಗಳು ಸಂಚರಿಸುತ್ತವೆ. ಹಳೆಯದಾಗಿರುವ ಈ ಸೇತುವೆ ದುರ್ಬಲಗೊಂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಸೇತುವೆಯ ಎರಡೂ ಭಾಗದಲ್ಲಿ ರಸ್ತೆ ಅಗಲೀಕರಣಗೊಂಡಿದೆ. ಆದರೆ ಸೇತುವೆ ಮಾತ್ರ ಕಿರಿದಾಗಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹೊಸ ಮತ್ತು ಅಗಲವಾದ ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ. ಸಂಬಂಧಪಟ್ಟ ಇಲಾಖೆ ಈ ಭಾಗದಲ್ಲಿ ನೂತನ ಸೇತುವೆ ನಿರ್ಮಿಸಿ ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.
ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯಲ್ಲಿನ ಸೇತುವೆ ಸರಿಪಡಿಸುವ ಅಥವಾ ಹೊಸದು ನಿರ್ಮಿಸುವ ಬಗ್ಗೆ ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ದೊಡ್ಡ ಅಪಘಾತ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಅಗಲವಾದ ಸೇತುವೆ ನಿರ್ವಾಣವಾದರೆ ಮಾತ್ರ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ರಸ್ತೆ ಸುಂದರವಾಗಿದ್ದು ವೇಗವಾಗಿ ಬರುವ ವಾಹನಗಳು ಕಿರು ಸೇತುವೆಯಲ್ಲಿ ನಿಯಂತ್ರಣ ತಪ್ಪುವಂತಾಗಿದೆ. ನಿತ್ಯ ಒಂದಲ್ಲ ಒಂದು ಸಮಸ್ಯೆಯಾಗುತ್ತಿದೆ. ಹೀಗಾಗಿ ಈ ಸೇತುವೆಯ ಬದಲಿಗೆ ನೂತನ ಸೇತುವೆ ನಿರ್ವಾಣದ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಸುರೇಶ್, ಗ್ರಾಮಸ್ಥ ಹಲವು ವರ್ಷಗಳ ಹಳೆಯ ಕಿರು ಸೇತುವೆಯಲ್ಲಿ ಎರಡು ವಾಹನಗಳು ಓಡಾಡಲು ಸಾಧ್ಯವಿಲ್ಲ. ಹೀಗಾಗಿ ಅಗಲವಾದ ಸೇತುವೆ ನಿರ್ವಾಣ ಅಗತ್ಯವಿದೆ. ನೂತನ ಸೇತುವೆ ನಿರ್ವಾಣಗೊಂಡರೆ ಈ ಭಾಗದ ಹಲವು ದಶಕದ ಕನಸು ಈಡೇರಲಿದೆ. ನವೀನ್, ವಾಹನ ಸವಾರ https://www.vijayavani.net/accident-awareness-lecture-in-bantakal https://www.vijayavani.net/inauguration-of-the-shoe-shop