ಸಿದ್ದರಾಮಯ್ಯ ಹೆಸರಿಗೆ ಧಕ್ಕೆ ತರಲು ಷಡ್ಯಂತ್ರ

18 RTL 01
Published on

ರಟ್ಟಿಹಳ್ಳಿ: ಜನಪರ ಆಡಳಿತ ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಧಕ್ಕೆ ತರಲು ಷಡ್ಯಂತ್ರ ರೂಪಿಸಿವೆ. ಸಿಎಂ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ ರಾಜ್ಯಪಾಲರ ಸಂವಿಧಾನ ಬಾಹಿರ ಕ್ರಮ ಖಂಡಿಸಿ ಹಾವೇರಿಯಲ್ಲಿ ಆ. 19ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ರಾಜ್ಯಪಾಲರ ನಡೆ ಖಂಡಿಸಿ ಪಟ್ಟಣದಲ್ಲಿ ಭಾನುವಾರ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಮುಡಾ ಹಗರಣದ ಕುರಿತಾಗಿ ತನಿಖೆ ಮಾಡಲು ಮುಖ್ಯಮಂತ್ರಿಗಳು ರಾಜ್ಯದ ನಿವೃತ್ತ ನ್ಯಾಯಾಧೀಶರಿಗೆ ಆದೇಶಿಸಿದ್ದರೂ ಸಹ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದು ಖಂಡನೀಯ.ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ರವೀಂದ್ರ ಮುದಿಯಪ್ಪನವರ, ಮಹೇಶ ಗುಬ್ಬಿ, ಪರಮೇಶಪ್ಪ ಕಟ್ಟೇಕಾರ, ಎಂ.ಎಸ್. ಪ್ರಕಾಶ, ನಾಗನಗೌಡ ಕೋಣ್ತಿ, ವಿಜಯ ಅಂಗಡಿ, ಎಂ.ಬಿ.ಜೋಕನಾಳ, ಜಾಕೀರ್ ಮುಲ್ಲಾ, ಮಕಬುಲ್​ಸಾಬ್ ಮುಲ್ಲಾ, ಅಬ್ಬಾಸ್ ಗೋಡಿಹಾಳ, ಜಿಯಾ ಜಡದಿ, ಅತಿಕ್ ಜಮಖಾನಿ, ರಮೇಶ ಭೀಮಪ್ಪನವರ, ಮಂಜು ಅಸ್ವಾಲಿ, ಮಂಜಣ್ಣ ಎಲಿವಾಳ, ಅನ್ವರಸಾಬ ಸವಣೂರ, ಇತರರಿದ್ದರು.

ಪ್ರತಿಭಟನೆ ಇಂದು

ಹಾವೇರಿ: ಸಿಎಂ ಸಿದ್ದರಾಮಯ್ಯ ಅವರನ್ನು ಕಾನೂನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯಪಾಲರು ನಿಯಮ ಬಾಹಿರವಾಗಿ ಪ್ರಾಸಿಕ್ಯೂಷನ್ ಜಾರಿ ಮಾಡಿರುವ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಆ.19 ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಕಾಗಿನೆಲೆ ರಸ್ತೆಯ ಮುರುಘಾಮಠದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಮೆರವಣಿಗೆ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net