

ವಿಜಯಪುರ: ಹಿಂದೂಸ್ಥಾನವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಷಡ್ಯಂತ್ರ ದೇಶದಲ್ಲಿ ನಡೆದಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ವಿಜಯಪುರ ನಗರದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಇದನ್ನು ತಡೆಯಲು ತಯಾರಾಗೋ ಕಾಲ ಪರಿಪಕ್ವವಾಗಿ ಈಗಾ ಬಂದಿದೆ. 2047 ಕ್ಕೆ ಹಿಂದೂಸ್ಥಾನವನ್ನು ಮುಸ್ಲಿ ರಾಷ್ಟ್ರವನ್ನಾಗಿ ಮಾಡಲು ಷಡ್ಯಂತ್ರ ವಿಚಾರ ಈ ಮುಂಚೆಯೂ ನಡೆದಿದೆ. ದೇಶ ಮಾಜಿ ಉಪ ರಾಷ್ಟ್ರಪತಿ ಪಾಕಿಸ್ತಾನದ ಏಜೆಂಟ್ ಆಗಿ ಕೆಲಸ ಮಾಡಿದ್ದು ದೇಶದ ಜನರ ಮುಂದೆ ಬರುತ್ತಿದೆ.ಭವಿಷ್ಯ ಭಾರತವನ್ನು ಉಳಿಸಲು ಪ್ರಧಾನಿ ಮೋದಿ ಅವರು ಅಗ್ನಿಪಥ ಮಾಡಿದ್ದಾರೆ ಎಂದು ಹೇಳಿದರು.
ಅಗ್ನಪಥದಲ್ಲಿ ನಾಲ್ಕು ವರ್ಷ ಸೇನೆಯಲ್ಲಿ ಕೆಲಸ ಮಾಡುತ್ತಾರೆ.ನಾಲ್ಕು ವರ್ಷಗಳ ಆವಧಿಯಲ್ಲಿ ಸೇನೆಯಲ್ಲಿ ಉತ್ತಮ ಕೆಲಸ ಮಾಡಿದರೆ ಸೇನೆಯಲ್ಲಿ ಮುಂದುವರೆಯುತ್ತಾರೆ. ಇಲ್ಲ ವಾಸಪ್ ಬಂದವರಿಗೆ ಇಲ್ಲಿನ ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಸಂಘ ಸಂಸ್ಥೆಗಳು ಸೆಕ್ಯೂರಿಟಿ ಕೆಲಸ ಕೊಡುತ್ತೇವೆ. ಅವರ ಅರ್ಹತೆ ಮೇರೆಗೆ ತಿಂಗಳಿಗೆ 20 ರಿಂದ 25 ಸಾವಿರ ಸಂಬಳ ನೀಡುತ್ತೇವೆ ಎಂದರು.
ದೇಶದ್ರೋಹಿಗಳು ದೇಶದ ಅನ್ನ ತಿಂದು ದೇಶದ ವಿರುದ್ಧ ಕೆಲಸ ಮಾಡುವವರು ಹಿಂದೂಗಳ ಮೇಲೆ ಏನಾದರೂ ಮಾಡಬಹುದು. ಕಾರಣ ನಮ್ಮ ಶಕ್ತಿ ಉಳಿಯಬೇಕಾದರೆ ಅಗ್ನಿಪಥ ಸೈನಿಕರು ಬೇಕಾಗಿದ್ದಾರೆ.ಇಸ್ರೇಲ್ನಲ್ಲಿ ಎಲ್ಲರೂ ಕಡ್ಡಾಯವಾಗಿ 10 ವರ್ಷ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ನಿಯಮವಿದೆ.ಮೆಣಸಿನಕಾಯಿಯಷ್ಟು ಇರೋ ಇಸ್ರೇಲ್ ದೇಶ ಜಗತ್ತಿನಲ್ಲಿ ಎಲ್ಲರನ್ನೂ ಹೆದರಿಸುತ್ತದೆ.ಅಗ್ನಿಪಥ ಸಮಾಜ ಧರ್ಮದ ವಿರುದ್ದ ಅಲ್ಲಾಯಾರು ದೇಶದ ಅನ್ನ ತಿಂದು ಪಾಕಿಸ್ತಾನ ಏಜೆಂಟ್ ಇರ್ತಾರೆ ಅವರ ವಿರುದ್ದ ಎಂದು ಹೇಳಿದರು.
ಪಿಡಿಎಫ್, ಪಿಎಫ್ಐಓ, ಎಸ್ಡಿಪಿಐಓ ಬ್ಯಾನ್ ಮಾಡುವ ಕುರಿತು ಹೇಳಿಕೆ ನೀಡಿದ ಅವರು, ಈ ಸಂಘಟನೆಗಳ ವಿರುದ್ದ ಸಾಕ್ಷ್ಯಾಧಾರಗಳು ಇದೀಗ ಸಿಗುತ್ತಿವೆ.ಸೂಕ್ತ ಸಾಕ್ಷಿಗಳು ಸಿಕ್ಕ ಬಳಿಕ ಇವೆಲ್ಲವನ್ನೂ ಬ್ಯಾನ್ ಮಾಡಲಾಗುತ್ತದೆ.ಇವುಗಳ ಹಿಂದೆ ಯಾವ ರಾಜಕಾರಣಗಳಿದ್ದಾರೆ, ರಾಜಕೀಯ ಪಕ್ಷಗಳು ಇದ್ದಾವೆ ಅವರ ಬಣ್ಣವೂ ಬಯಲಾಗುತ್ತದೆ. ಮಾಜಿ ಉಪರಾಷ್ಟ್ರಪತಿ ಬಣ್ಣ ಬಯಲಾಗಿದೆ, ದಾಖಲೆ ಸಮೇತ ಸಿಕ್ಕಿವೆ ಇದನ್ನು ರಾ ಅವರೇ ಹೇಳಿದ್ದಾರೆ. ಇನ್ನೂ ದೊಡ್ಡ ದೊಡ್ಡ ಲೀಡರ್ಗಳಿದ್ದಾರೆ ಅವರ ಬಣ್ಣ ಹೊರ ಬರುತ್ತದೆನರೇಂದ್ರ ಮೋದಿ ಅವರು ಇರೋವರೆಗೂ ಯಾವುದೇ ಷಡ್ಯಂತ್ರ ಮಾಡಿದರೂ ನಡೆಯಲ್ಲ ಎಂದು ಹೇಳಿದರು.