ರಾಹುಲ್ ಗಾಂಧಿ ರಾಜಕೀಯ ಜೀವನ ಅಂತ್ಯಕ್ಕೆ ಒಳಸಂಚು

Rahul Gandhi, HKR
Published on

ಹಿರೇಕೆರೂರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರಾಜಕೀಯ ಜೀವನ ಅಂತ್ಯಗೊಳಿಸಲು ಕೇಂದ್ರ ಸರ್ಕಾರ ಒಳಸಂಚು ರೂಪಿಸುತ್ತಿದ್ದು, ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ತಾಲೂಕು ಕಾಂಗ್ರೆಸ್ ಘಟಕದಿಂದ ಬುಧವಾರ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ರಮೇಶ ಮಡಿವಾಳರ, ಪಿ.ಡಿ. ಬಸನಗೌಡ್ರ ಮಾತನಾಡಿ, ಸೂರತ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ಹೈಕೋರ್ಟ್‌ನಲ್ಲಿ ಅರ್ಜಿ ಪ್ರಶ್ನಿಸಲಾಗಿತ್ತು. ಅಲ್ಲಿಯೂ ತೀರ್ಪಿಗೆ ತಡೆಯಾಜ್ಞೆ ನೀಡದೇ ರಾಹುಲ್ ಗಾಂಧಿ ಅವರ ಅರ್ಜಿ ವಜಾಗೊಂಡಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ದುರ್ಗಪ್ಪನೀರಲಗಿ, ಮಂಜುನಾಥ ತಂಬಾಕದ, ಹನುಮಂತಗೌಡ ಭರಮಣ್ಣನವರ, ಎಸ್.ಕೆ. ಕರಿಯಣ್ಣನವರ, ವಸಂತ ದ್ಯಾವಕ್ಕಳವರ, ವಿನಯ್ ಪಾಟೀಲ, ಸೋಮಣ್ಣ ಪೂಜಾರ, ಜ್ಞಾನೇಶ ಅಬಲೂರ, ಸಿದ್ದು ತಂಬಾಕದ, ಆನಂದ ನಾಯ್ಕರ್, ಸುರೇಶ ಮಡಿವಾಳರ, ಕಪಿಲ್ ಪೂಜಾರ, ಎಸ್.ಬಿ. ತಿಪ್ಪಣ್ಣನವರ, ಶಂಭು ಹಂಸಭಾವಿ, ಬಿರೇಶ ಹಾರ‌್ನಳ್ಳಿ, ಪ್ರವೀಣ ಅಬಲೂರ ಹಾಗೂ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net