ಸಮಾಜ ಸುಧಾರಕರ ವಿರುದ್ಧ ಸಂಚು

4 BKD 1
ಹಾ.ಮ.ಭಟ್ಟ ನೆನಪಿನ ಹಬ್ಬದಲ್ಲಿ ಎಲ್.ಮುಕುಂದರಾಜ್, ಪಿ.ವಿಷ್ಣುನಾಥ್, ಲೋಕಪಾಲ್ ಜೈನ್, ವೆಂಕಟಗಿರಿ ಭಟ್ ಇತರರಿದ್ದರು.
Published on

ಬ್ಯಾಕೋಡು: ಸಮಾಜ ಬದಲಾವಣೆಗೆ ತಮ್ಮ ವಿಚಾರಧಾರೆ ಮತ್ತು ಪ್ರಯತ್ನಗಳ ಮೂಲಕ ಸಾಗಿದ ಸುಧಾರಕರನ್ನ ದ್ವೇಷ ಮಾಡುತ್ತ ಕೊಲ್ಲುವ ಸಂಚು ಮಾಡುವ ಮನಸ್ಸುಗಳು ಎಲ್ಲ ಕಾಲದಲ್ಲೂ ಜೀವಂತ ಇದ್ದವು ಎನ್ನುವುದು ಶಾಶ್ವತ ಸತ್ಯ ಎಂದು ಹಿರಿಯ ಸಾಹಿತಿ ಎಲ್. ಮುಕುಂದರಾಜ್ ಅಭಿಪ್ರಾಯಪಟ್ಟರು.
ತುಮರಿಯ ಗೋಪಾಲ ಗೌಡ ರಂಗಮಂದಿರದಲ್ಲಿ ಕಿನ್ನರಮೇಳ ಆಯೋಜನೆ ಮಾಡಿದ್ದ ಹಾ.ಮ.ಭಟ್ಟ ನೆನಪಿನ ಹಬ್ಬ ಕಾರ್ಯಕ್ರಮದಲ್ಲಿ ಗಾಂಧಿ, ಅಂಬೇಡ್ಕರ್, ನೆಹರು ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಕೂಡ ಇದು ಮುಂದುವರಿದಿದ್ದು ಅಲ್ಪಜ್ಞಾನಿಗಳು ಮತ್ತು ಸಂಕುಚಿತವಾದಿಗಳು ಪ್ರತಿನಿತ್ಯ ಸುಳ್ಳು ಬಿತ್ತುವ ಮೂಲಕ ನಕರಾತ್ಮಕತೆಯನ್ನು ವ್ಯಾಪಕಗೊಳಿಸಿದ್ದು ಅವರನ್ನು ಎದುರಿಸುವುದು ನಿತ್ಯದ ಸವಾಲಾಗಿದೆ ಎಂದು ಅವರು ವಿವರಿಸಿದರು.
ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆಗಳು ಮೂಲದಲ್ಲಿ ಒಂದೇ ಮಾರ್ಗದ ಪಯಣ ಹೊಂದಿವೆ. ಅದರ ಗುರಿ ದೇಶದ ಜನರ ಸಮಾನತೆಯ ಅಭ್ಯುದಯದ ಕಡೆ ಕೊಂಡೊಯ್ಯುವುದಾಗಿತ್ತು ಎಂದು ವಿಶ್ಲೇಷಿಸಿದರು.
ಗಾಂಧಿ ಮಾರ್ಗದ ಬಗ್ಗೆ ಮಾತನಾಡಿದ ನೀನಾಸಂ ಹಿರಿಯ ರಂಗಕರ್ಮಿ ಕೆ.ವಿ.ಅಕ್ಷರ, ಗಾಂಧಿ ಒಳಗಿನ ಹುಡುಕಾಟ ನಡೆಸಿ ಆ ಮೂಲಕ ಪರಿಪೂರ್ಣ ವ್ಯಕ್ತಿತ್ವ ವಿಕಾಸದಿಂದ ಸಮ ಸಮಾಜ ನಿರ್ಮಾಣ ಎನ್ನುವ ನಂಬಿಕೆ ಹೊಂದಿದ್ದರು ಎಂದರು.
ಕೇರಳ ಶಾಸಕ ಪಿ.ವಿಷ್ಣುನಾಥ್ ಮಾತನಾಡಿ, ದ್ವೀಪದಲ್ಲಿ ಇರುವ ಬದುಕಿನ ಏಕತಾನತೆ ನಡುವೆ ಹೊಸತನ ಹುಡುಕುವ ಕ್ರಿಯಾಶೀಲತೆಗೆ ನೆನಪಿನ ಉತ್ಸವ ಒಂದು ವೇದಿಕೆ ಆಗಿದೆ. ರಾಜ್ಯದ ಹಲವು ಚಿಂತಕರು ಒಂದು ಸೂರಿನಡಿ ಸೇರುವುದು ಮತ್ತು ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅನುಸಂಧಾನ ನಡೆಸಲು ಅನುಕೂಲವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕಪಾಲ್ ಜೈನ್, ಹೊನಗೋಡು ವೆಂಕಟಗಿರಿ ಭಟ್, ಕೆ.ಜಿ.ಕೃಷ್ಣಮೂರ್ತಿ, ಹಾಲ್ಕೆರೆ ರಾಘವೇಂದ್ರ ಇದ್ದರು.
ಸುರೇಶ್ ಕಂಜರ್ಪಣೆ, ಶಶಿ ಸಂಪಳ್ಳಿ, ಸ್ವಾಮಿ, ಪ್ರಸಾದ್ ರಕ್ಷಿದಿ, ಸುಧೀರ್‌ಕುಮಾರ್ ಮುರೊಳ್ಳಿ, ಚಂದ್ರಿಕಾ, ನಾದಮಣಿ, ಮಮತಾ ಅರಸೀಕೆರೆ, ಫಾತಿಮಾ ರಾಲಿಯಾ, ಸವಿತಾ ನಾಗಭೂಷಣ ಇತರರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net