ರೋಣ ಪ್ರಗತಿಗೆ ಅನುದಾನ ಕ್ರೋಡೀಕರಣ

G.S. Patil
Published on

ರೋಣ: ಅತಿ ಹೆಚ್ಚು ಅನುದಾನ ಕ್ರೋಡೀಕರಿಸಿ ಪಟ್ಟಣವನ್ನು ಅಭಿವೃದ್ಧಿಪಡಿಸಲಾಗುವುದು. ಹೊಸ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪುರಸಭೆ ವತಿಯಿಂದ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪಟ್ಟಣದ ಸೌಂದರ್ಯಿಕರಣಕ್ಕೆ ಆದ್ಯತೆ ನೀಡಲಾಗುವುದು. ಕಾರ್ಯಕರ್ತರ ಹಾಗೂ ಅಧಿಕಾರಿಗಳ ಸಲಹೆ ಪಡೆದು ಹೊಸ ಯೋಜನೆಗಳ ಜಾರಿಗೆ ಶ್ರಮಿಸಲಾಗುವುದು ಎಂದರು.

ಪುರಸಭೆಯ ಹಿರಿಯ ಸದಸ್ಯ ಮಲ್ಲಯ್ಯಜ್ಜ ಮಹಾಪುರುಷಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣವು ನಗರಸಭೆಯಾಗಿ ಪರಿವರ್ತನೆಗೊಳ್ಳಬೇಕು ಎಂದರು. ಗುಲಗಂಜಿಮಠದ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿದರು.

ಪುರಸಭೆ ಅಧ್ಯಕ್ಷೆ ರಂಗವ್ವ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಹಜರತ್ ಸೈಯದ್ ಶಾ ಸುಲೇಮಾನ ಶಾವಲ ದರ್ಗಾದ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು. ಶಾಸಕರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು.

ಪುರಸಭೆ ಉಪಾಧ್ಯಕ್ಷ ಮಿಥುನ್ ಪಾಟೀಲ, ವೀರಣ್ಣ ಶೆಟ್ಟರ, ಮುತ್ತಣ್ಣ ಸಂಗಳದ, ವಿ.ಆರ್. ಗುಡಿಸಾಗರ, ವಿಶ್ವನಾಥ ಜಿಡ್ಡಿಬಾಗಿಲ, ವಿ.ಬಿ. ಸೋಮನಕಟ್ಟಿಮಠ, ಬಾವಾಸಾಬ ಬೇಟಗೇರಿ, ಎ.ಎಸ್. ಖತೀಬ, ವಿದ್ಯಾ ದೊಡ್ಡಮನಿ, ನಾಜಬೇಗಂ ಯಲಿಗಾರ, ದುರಗಪ್ಪ ಹಿರೇಮನಿ, ಗದಿಗೆಪ್ಪ ಕಿರೇಸೂರ, ಈಶ್ವರಪ್ಪ ಕಡಬಿನಕಟ್ಟಿ, ಮೌನೇಶ ಹಾದಿಮನಿ, ಕಲೀಲಹ್ಮದ ರಾಮದುರ್ಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net