ಬೆಳಗಾವಿ ತಂಡಕ್ಕೆ ಸಮಾಧಾನಕರ ಪ್ರಶಸ್ತಿ

Manju Army
Published on

ಬೆಳಗಾವಿ: ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ಕೂಲ್ ಬ್ಯಾಂಡ್‌ಗಳ ಗ್ರಾಂಡ್ ಫಿನಾಲೆಯಲ್ಲಿ ಬೆಳಗಾವಿಯ ಕಂಟೋನ್ಮೆಂಟ್‌ನ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಸಮಾಧಾನಕರ ಬಹುಮಾನಕ್ಕೆ ಪಾತ್ರವಾಗಿದೆ.

ಪೈಪ್ ಬ್ಯಾಂಡ್ ವಿಭಾಗದಲ್ಲಿ ಉತ್ತರಪ್ರದೇಶ ಲಖನೌದ ಸಿಟಿ ಮಾಂಟೆಸರಿ ಸ್ಕೂಲ್ ಪ್ರಥಮ ಸ್ಥಾನ ಪಡೆಯಿತು. ಸಿಕ್ಕಿಂನ ನಾರ್ತ್ ಸಿಕ್ಕಿಂ ಅಕಾಡೆಮಿ ಎರಡನೇ ಹಾಗೂ ಮಹಾರಾಷ್ಟ್ರದ ಸಾಂಗ್ಲಿಯ ಆರ್‌ಬಿಪಿ ಮಿಲಿಟರಿ ಸ್ಕೂಲ್ ಸ್ಪೋರ್ಟ್ ಅಕಾಡೆಮಿ ಮೂರನೇ ಸ್ಥಾನ ಪಡೆದುಕೊಂಡಿವೆ. ಬೆಳಗಾವಿ ಕಂಟೋನ್ಮೆಂಟ್‌ನ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ಸಂಖ್ಯೆ-2 ಸಮಾಧಾನಕರ ಪ್ರಶಸ್ತಿ ಪಡೆದಿದೆ. ರಕ್ಷಣಾ ರಾಜ್ಯ ಖಾತೆ ಸಚಿವ ಸಂಜಯ್ ಸೇಥ್ ಬಹುಮಾನ ವಿತರಿಸಿದರು.

ಪ್ರಥಮ ಬಹುಮಾನವಾಗಿ 21 ಸಾವಿರ ರೂ., ದ್ವಿತೀಯ 16 ಸಾವಿರ ರೂ. ಹಾಗೂ ತೃತೀಯ ಬಹುಮಾನವಾಗಿ 11 ಸಾವಿರ ರೂ. ನೀಡಲಾಯಿತು. ಸಮಾಧಾನಕರ ತಂಡಕ್ಕೆ 3 ಸಾವಿರ ರೂ. ವಿತರಿಸಲಾಗಿದೆ. ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಪ್ರಮಾಣಪತ್ರ ನೀಡಲಾಗಿದೆ.

ಒಟ್ಟು 13 ರಾಜ್ಯಗಳ 16 ತಂಡಗಳು ಅಂತಿಮ ಸುತ್ತಿಗೆ ಪ್ರವೇಶಿಸಿದ್ದವು. ನವದೆಹಲಿ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸ್ಪರ್ಧೆ ಆರನೇ ಆವೃತ್ತಿ ಜ.24 ಹಾಗೂ 25ರಂದು ನಡೆಸಲಾಗಿತ್ತು. ಕೇಂದ್ರ ಶಿಕ್ಷಣ ಸಚಿವಾಲಯವು ರಕ್ಷಣ ಸಚಿವಾಲಯದ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಒಟ್ಟು 463 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net