

ರೋಣ: ಪೌರ ಕಾರ್ಮಿಕರ ಕೆಲಸವು ಮುಖ್ಯ ಕಾರ್ಯದರ್ಶಿ ಮಾಡುವ ಕೆಲಸಕ್ಕೆ ಸಮನಾದುದು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 14ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಚ್ಛ ಭಾರತ ಯೋಜನೆ ಆರಂಭವಾದಾಗಿನಿಂದ ಎಲ್ಲೆಡೆ ಈಗ ಅಶುಚಿತ್ವ ಕಡಿಮೆಯಾಗಿದೆ. ಪುರಸಭೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಮತ್ತಷ್ಟು ಜಾಗೃತಿ ಮೂಡಿಸಬೇಕು. ಪೌರ ಕಾರ್ಮಿಕರಿಗೆ ಸಕಲ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಪೌರ ಕಾರ್ಮಿಕರ ಸಂಬಳವನ್ನು 7 ಸಾವಿರದಿಂದ 17 ಸಾವಿರಕ್ಕೆ ಹೆಚ್ಚಿಸಲು ಚಿಂತಿಸಲಾಗಿದೆ ಎಂದರು.
ತಹಸೀಲ್ದಾರ್ ನಾಗರಾಜ ಕೆ. ಮಾತನಾಡಿ, ಪೌರ ಕಾರ್ಮಿಕರೆಂದರೆ ತಾಯಿ ಇದ್ದಂತೆ. ತಾಯಿ ಮನೆಯನ್ನು ಸ್ವಚ್ಛಗೊಳಿಸಿ ಅಂದವಾಗಿಟ್ಟರೆ, ಪೌರ ಕಾರ್ಮಿಕರು ಊರು ಸ್ವಚ್ಛವಾಗಿಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡುತ್ತಾರೆ ಎಂದರು.
ಯೂಸೂಫ್ ಇಟಗಿ ಮಾತನಾಡಿ, ಪೌರ ಕಾರ್ಮಿಕರ ಕೊರತೆ ನಡುವೆಯೂ ಸ್ವಚ್ಛ ಪಟ್ಟಣ ಪಟ್ಟಿಯಲ್ಲಿ ರೋಣ ಪುರಸಭೆ ಜಿಲ್ಲೆಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ ಎಂದರು. ನಿವೃತ್ತ ಶಿಕ್ಷಕ ಎಲ್.ಐ ದಿಂಡೂರ ಮಾತನಾಡಿದರು.
ತಹಸೀಲ್ದಾರ್ ನಾಗರಾಜ ಕೆ., ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನುಮಂತಪ್ಪ ತಳ್ಳಿಕೇರಿ, ಪುರಸಭೆ ಸದಸ್ಯರಾದ ಮುತ್ತಣ್ಣ ಗಡಗಿ, ಸಂತೋಷ ಕಡಿವಾಲ, ಮಲ್ಲಯ್ಯ ಮಹಾಪುರುಷಮಠ, ವಿದ್ಯಾ ದೊಡ್ಡಮನಿ, ಸಂಗಪ್ಪ ಜಿಡ್ಡಿಬಾಗಿಲ, ಬಸಮ್ಮ ಹಿರೇಮಠ, ಸಂಗಪ್ಪ ಜಿಡ್ಡಿಬಾಗಿಲ, ನಿಂಗಪ್ಪ ಕಾಶಪ್ಪನವರ, ಶಿವಕುಮಾರ ಪಟ್ಟಣಶೆಟ್ಟಿ ಇದ್ದರು. ಮುಖ್ಯಾಧಿಕಾರಿ ರಮೇಶ ಹೊಸಮನಿ ಸ್ವಾಗತಿಸಿದರು.