

ಎನ್.ಆರ್.ಪುರ: ಪಟ್ಟಣದ ಕುವೆಂಪು ಕ್ರೀಡಾಂಗಣವನ್ನು ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದು ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಹೇಳಿದರು.
ಗುರುವಾರ ಕುವೆಂಪು ಕ್ರೀಡಾಂಗಣದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾ ಕೂಟದಲ್ಲಿ ಮಾತನಾಡಿ, ಕ್ರೀಡಾಕೂಟದಲ್ಲಿ ಗೆದ್ದವರು ಜಿಲ್ಲಾ ಮಟ್ಟದಲ್ಲೂ ಗೆಲ್ಲಬೇಕು ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಮಳೆ ಬರುತ್ತಿರುವುದರಿಂದ ಮಕ್ಕಳು ಆಟವಾಡಲು ತೊಂದರೆ ಆಗುತ್ತದೆ. ಮಲೆನಾಡು ಭಾಗದಲ್ಲಿ ಅಕ್ಟೋಬರ್‌ನಲ್ಲಿ ಕ್ರೀಡಾಕೂಟ ನಡೆಸಿದರೆ ಅನುಕೂಲವಾಗಲಿದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರು ಕುವೆಂಪು ಕ್ರೀಡಾಂಗಣದ ಅಭಿವೃದ್ಧಿಗೆ ಕ್ರೀಡಾ ಸಚಿವರಿಗೆ 1 ಕೋಟಿ ರೂ. ಅನುದಾನದ ಬೇಡಿಕೆ ಇಟ್ಟಿದ್ದಾರೆ. ಅನುದಾನ ಬಂದರೆ ಹೈಟೆಕ್ ಕ್ರೀಡಾಂಗಣ ನಿರ್ಮಿಸಬಹುದು ಎಂದರು.
ಬಿಇಒ ಕೆ.ಆರ್.ಪುಷ್ಪಾ, ಕೆಪಿಎಸ್ ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಪಪಂ ಅಧ್ಯಕ್ಷೆ ಸುರೈಯಾಭಾನು, ಉಮಾ ಕೇಶವ್, ಸದಸ್ಯರಾದ ಜುಬೇದಾ, ಮಹಮ್ಮದ್‌ವಸೀಂ, ಪುರುಷೋತ್ತಮ್, ಎಚ್.ಎನ್.ರವಿಂಶಂಕರ್, ಕೆ.ಎ.ಅಬೂಬಕರ್, ವಾಣಿ ನರೇಂದ್ರ, ಶಕುಂತಲಾ, ಮೇಘನಾ, ಉದಯ, ಸಲೀಂ, ಎಚ್.ಎಂ.ಶಿವಣ್ಣ, ಮಂಜುನಾಥ್, ಸರಸ್ವತಿ, ರುದ್ರಪ್ಪ, ರಾಘವೇಂದ್ರ, ರಂಗಪ್ಪ ಇತರರಿದ್ದರು.