

ಮಂಗಳೂರು: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟಗಣನೀಯ ಕುಸಿತ ಕಂಡಿದೆ. ಏಳು ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷದಂತೆಯೇ ಈ ವರ್ಷವೂ ಮೇ.9 ಕ್ಕೆ 3.94 ಮೀ.ಗೆ ನೀರಿನ ಮಟ್ಟ ಇದೆ. ನೇತ್ರಾವತಿ ನದಿಯಲ್ಲಿ ಜಲ ಮಟ್ಟ ಇಳಿಕೆಯಾದ ಕಾರಣ ನಗರದಲ್ಲಿ ನೀರಿನ ರೇಶನಿಂಗ್ ಆರಂಭಗೊಂಡಿದ್ದು, ದಿನ ಬಿಟ್ಟು ದಿನ ನೀರು ಪೂರೈಕೆ ಯೋಜನೆ ಸುಸೂತ್ರವಾಗಿ ನಡೆಯುತ್ತಿದೆ.
ಗುರುವಾರ ಬೆಂದೂರು ಸ್ಥಾವರ ವ್ಯಾಪ್ತಿಯ ಕೋರ್ಟ್ ವಾರ್ಡ್, ಕಾರ್ಸ್ಟ್ರೀಟ್, ಬಾವುಟಗುಡ್ಡೆ, ಆಕಾಶವಾಣಿ, ಪದವು, ಗೋರಿಗುಡ್ಡೆ, ಸೂಟರ್ಪೇಟೆ, ಶಿವಭಾಗ್, ಬೆಂದೂರು, ಕದ್ರಿ, ವಾಸ್ ಲೇನ್, ಕುದ್ರೋಳಿ, ಮೀನುಗಾರಿಕಾ ಬಂದರು, ಕೊಡಿಯಾಲ್ಬೈಲ್. ಪಡೀಲ್ ಸ್ಥಾವರ: ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸ್ ನಗರ, ಬಜಾಲ್, ತಿರುವೈಲು, ವಾಮಂಜೂರು. ಶಕ್ತಿನಗರ ಟ್ಯಾಂಕ್: ಕುಂಜತ್ತಬೈಲ್, ಮುಗುರೋಡಿ, ಶಕ್ತಿ ನಗರ, ಸಂಜಯ ನಗರ, ಪ್ರೀತಿ ನಗರ, ಮಂಜಡ್ಕ, ರಾಜೀವನಗರ, ಬೊಂದೆಲ್, ಗಾಂಧಿನಗರ, ಶಾಂತಿನಗರ, ಕಾವೂರು. ತುಂಬೆ ಪಣಂಬೂರು ನೇರ ಮಾರ್ಗ ವ್ಯಾಪ್ತಿಯ ಕಂಕನಾಡಿ, ನಾಗುರಿ, ಪಂಪ್ವೆಲ್, ಬಲ್ಲೂರುಗುಡ್ಡೆ, ಪಡೀಲ್ಗೆ ನೀರು ಪೂರೈಕೆಯಾಗಿದೆ.
ಗುರುವಾರ ತುಂಬೆ ಡ್ಯಾಂ ಮಟ್ಟ 3.94 ಹಾಗೂ ಎಎಂಆರ್ ನೀರಿನ ಮಟ್ಟ 15.48 ಮೀಟರ್ ಕಂಡುಬಂದಿತ್ತು. ಬುಧವಾರ ತುಂಬೆ ಡ್ಯಾಂ ಮಟ್ಟ 3.98 ಹಾಗೂ ಎಎಂಆರ್ ನೀರಿನ ಮಟ್ಟ 15.52 ಮೀಟರ್ ಇತ್ತು. ಈ ಎರಡು ಡ್ಯಾಂಗಳಲ್ಲಿ ಸರಾಸರಿ 0.10ಮೀ ಪ್ರತಿ ದಿನ ಇಳಿಕೆಯಾಗುತ್ತಿದೆ. ತುಂಬೆಯಲ್ಲಿ ನೀರಿನ ಮಟ್ಟ ಕುಸಿಯದಂತೆ ತಡೆಯಲು ಹರೆಕಳ ಪ್ರತಿ ದಿನ 15&20 ಎಂಎಲ್ಡಿ ನೀರು ಪಂಪಿಂಗ್ ಮಾಡಲಾಗುತ್ತಿದೆ. ಇದರ ಹೊರತಾಗಿಯೂ ಡ್ಯಾಂ ಮಟ್ಟ ಕುಸಿಯುತ್ತಿದೆ.
---
ತುಂಬೆ ಹಾಗೂ ಎಎಂಆರ್ ಡ್ಯಾಂಗಳ ನೀರಿನ ಮಟ್ಟ ಕುಸಿತವಾಗುತ್ತಿದೆ. ಈ ಮಧ್ಯೆ ಹರೆಕಳದಿಂದ ತುಂಬೆಗೆ ನಿರಂತರ ನೀರು ಪಂಪಿಂಗ್ ಮಾಡಲಾಗಿತ್ತಿದೆ. ನೀರಿನ ಕುಸಿತದ ನಡುವೆಯೂ ಪ್ರತಿ ದಿನ ತುಂಬೆ ಡ್ಯಾಂನಿ ನೀರು ಲಿಫ್ಟ್ ಮಾಡಿಪೂರೈಕೆಯಾಗುತ್ತಿದೆ. ಸಧ್ಯಕ್ಕೆ ನೀರಿನ ರೇಷನಿಂಗ್ ಚಾಲ್ತಿಯಲ್ಲಿದ್ದು, ಮಳೆಯಾಗುವ ವರೆಗೆ ಹೀಗೆಯೇ ಮುಂದುವರಿಯಲಿದೆ.
> ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್