ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆ ನೌಕರರೆಂದು ಪರಿಗಣಿಸಿ

14-02-Shiva-3
ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ರಾಯಚೂರಿನ ಜಲಾಲ್‌ನಗರದಲ್ಲಿನ ಸ್ಮಶಾನದಲ್ಲಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಪದಾಕಾರಿಗಳು ಕುಣಿಯಲ್ಲಿ ಕುಳಿತು ಬುಧವಾರ ಪ್ರತಿಭಟನೆ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ವೀರೇಶ, ಪದಾಕಾರಿಗಳಾದ ಚಂದಪ್ಪ, ನರಸಿಂಹಲು, ಕರಿಯಪ್ಪ ಬುರ್ದಿಪಾಡ, ನರಸಿಂಹಲು ಶಾಖವಾದಿ, ಜಂಬಯ್ಯ, ಹನುಮಂತು, ಲಾಜರ್, ಚಂದ್ರಯ್ಯ, ರಾಮಣ್ಣ, ರಾಮಪ್ಪ ಹೆಗ್ಗಸನಹಳ್ಳಿ, ನಾಗಪ್ಪ, ಡಿ.ಎಸ್.ಶರಣಬಸವ ಇದ್ದರು.
Published on

ರಾಯಚೂರು: ಮಸಣ ಕಾರ್ಮಿಕರನ್ನು ನಗರ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದಿಂದ ಸ್ಥಳೀಯ ಜಲಾಲ್ ನಗರದ ಸ್ಮಶಾನದಲ್ಲಿ ಕುಣಿಯಲ್ಲಿ ಕುಳಿತು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಮತ್ತು ಜಿಲ್ಲೆಯ ಎಲ್ಲ ಗ್ರಾಮದಲ್ಲಿನ ಸ್ಮಶಾನಗಳಲ್ಲಿ ಕಾರ್ಮಿಕರು ಕುಣಿ ತೋಡುವ ಮತ್ತು ಮುಚ್ಚುವ ಕೆಲಸ ಮಾಡುತ್ತಿದ್ದು, ಹಲವು ವರ್ಷಗಳಿಂದ ಕನಿಷ್ಠ ವೇತನ, ಸೌಲಭ್ಯಗಳಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಶ್ರಮದ ಕೆಲಸ ಮಾಡುತ್ತಿದ್ದರೂ ನೌಕರರೆಂದು ಪರಿಗಣಿಸಲಾಗಿಲ್ಲ.
ಮಸಣಕ್ಕೆ ಒಬ್ಬರಂತೆ ಕಾರ್ಮಿಕರನ್ನು ನೇಮಕ ಮಾಡಬೇಕು. 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮಾಸಿಕ 3 ಸಾವಿರ ರೂ. ಪಿಂಚಣಿ ನೀಡಬೇಕು. ಕಾರ್ಮಿಕರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಮಕ್ಕಳ ಮದುವೆಗೆ ಆರ್ಥಿಕ ನೆರವು, ನಿವೇಶನ ನೀಡಬೇಕು.
ಎಲ್ಲ ಸ್ಮಶಾನಗಳನ್ನು ಅಭಿವೃದ್ಧಿ ಪಡಿಸಲು ವಿಶೇಷ ಅನುದಾನ ಕಾಯ್ದಿರಿಸಬೇಕು. ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಬೇಕು. ಸ್ಮಶಾನಗಳಲ್ಲಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೀರಿನ ಸೌಲಭ್ಯಕ್ಕಾಗಿ ಕೊಳವೆಬಾವಿ ಕೊರೆಸಬೇಕು. ಕುಣಿತೋಡಲು ಅಗತ್ಯ ಪರಿಕರ ಹಾಗೂ ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ವೀರೇಶ, ಪದಾಕಾರಿಗಳಾದ ಚಂದಪ್ಪ, ನರಸಿಂಹಲು, ಕರಿಯಪ್ಪ ಬುರ್ದಿಪಾಡ, ನರಸಿಂಹಲು ಶಾಖವಾದಿ, ಜಂಬಯ್ಯ, ಹನುಮಂತು, ಲಾಜರ್, ಚಂದ್ರಯ್ಯ, ರಾಮಣ್ಣ, ರಾಮಪ್ಪ ಹೆಗ್ಗಸನಹಳ್ಳಿ, ನಾಗಪ್ಪ, ಡಿ.ಎಸ್.ಶರಣಬಸವ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net