ಹುಬ್ಬಳ್ಳಿ: ಅಲೆಮಾರಿ ಜಾತಿಗಳನ್ನು ಗುರುತಿಸಿ ನಮ್ಮ ಜನಾಂಗದ ಅಭಿವೃದ್ಧಿ ಹಾಗೂ ಮುಖ್ಯವಾಹಿನಿಗೆ ತರುವಲ್ಲಿ ಸಾಕಷ್ಟು ಶ್ರಮ ವಹಿಸುತ್ತಿರುವ ವಕೀಲ, ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರೂ ಆದ ಡಾ. ಸಿ.ಎಸ್. ದ್ವಾರಕಾನಾಥ ಅವರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಬೇಕೆಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಸಂಟನಾ ಕಾರ್ಯದರ್ಶಿ ಹನುಮಂತಪ್ಪ ಟೀಕೋಳ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಕಾಂಗ್ರೆಸ್ ನಾಯಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ದ್ವಾರಕಾನಾಥ ಅವರನ್ನು ಪರಿಷತ್ಗೆ ನೇಮಿಸುವುದರಿಂದ ಅಲೆಮಾರಿ ಜನಾಂಗದವರಿಗೆ ಶಕ್ತಿ ಬರುತ್ತದೆ. ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಹಾಯವಾಗುತ್ತದೆ ಎಂದರು.
ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿಸಿರುವ ನಿಗಮದಲ್ಲಿ ಂಡ್ ಇಲ್ಲ. ಅನೇಕ ಸರ್ಕಾರಿ ಯೋಜನೆಗಳಿದ್ದರೂ ಜನರಿಗೆ ತಲುಪುತ್ತಿಲ್ಲ. ಈ ದಿಸೆಯಲ್ಲಿ ಅಲೆಮಾರಿಗಳ ಸಮಗ್ರ ಮಾಹಿತಿ ಇರುವ ಇವರನ್ನು ನೇಮಿಸುವುದರಿಂದ ಬಹಳಷ್ಟು ಅನುಕೂಲವಾಗುತ್ತದೆ ಎಂದರು.
ಮಹಾಸಭಾ ಜಿಲ್ಲಾಧ್ಯಕ್ಷ ರಾಜಶೇಖರ ಡೊಂಕಣ್ಣವರ ಮಾತನಾಡಿ,ಸಮುದಾಯದವರಲ್ಲಿ ಇದ್ದ ಭಿಾಟನೆ, ಬಾಲ್ಯ ವಿವಾಹ ಮುಂತಾದ ಪಿಡುಗುಗಳನ್ನು ನಿಲ್ಲಿಸುವಲ್ಲಿ ದ್ವಾರಕಾನಾಥ ಅವರ ಪಾತ್ರವಿದೆ. ಅಲೆಮಾರಿಗಳ ಬದುಕಿನಲ್ಲಿ ಬಹಳಷ್ಟು ಬದಲಾವಣೆ ತಂದಿದ್ದಾರೆ ಎಂದರು.
ಮಹಾಸಭಾದ ಗೌರವ ಅಧ್ಯಕ್ಷ ಲಚಮಪ್ಪ ದಾಸರ, ಕಾರ್ಯದಶಿರ್ ಅಣ್ಣಪ್ಪ ಜವ್ಹಾಣ, ನಿರ್ದೇಶಕಿ ಲಕ್ಷಿ$್ಮ ಕಾಲವಾಡ, ಸದಸ್ಯ ಹನುಮಂತಪ್ಪ ಉಳ್ಳಿ, ಮುರಳಿ ದತ್ತವಾಡ ಇತರರು ಇದ್ದರು.