ಅಡಕೆಗೆ ಪರ್ಯಾಯ ಕೃಷಿ ಚಿಂತಿಸಿ

8hos1p adike nittur (1)
ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ಆಯೋಜಿಸಿದ್ದ ಕೃಷಿ ಕಾರ್ಯಾಗಾರವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ನಾಗರಾಜಪ್ಪ, ಜಗದೀಶ್, ಪ್ರಕಾಶ್, ಪುಟ್ಟಪ್ಪ ಇತರರಿದ್ದರು.
Published on

ಹೊಸನಗರ: ನಮ್ಮ ರೈತರೇ ತಜ್ಞರಾಗಿದ್ದು ಮಲೆನಾಡ ಜೀವನಾಡಿ ಅಡಕೆ ಬೆಳೆಯನ್ನು ಸಂರಕ್ಷಣೆಯತ್ತ ಗಮನಹರಿಸಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ತಾಲೂಕಿನ ನಿಟ್ಟೂರು ರಾಮೇಶ್ವರ ದೇಗುಲದ ಸಭಾಭವನದಲ್ಲಿ ಶೋಧ ಾರ್ಮರ್ಸ್‌ ಪ್ರೊಡ್ಯೂಸರ್ ಕಂಪನಿ, ತೋಟಗಾರಿಕಾ ಇಲಾಖೆ ಸೋಮವಾರ ಆಯೋಜಿಸಿದ್ದ ಪಾರಂಪರಿಕ ಕೃಷಿ ಮಹತ್ವದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬಯಲುಸೀಮೆಯಲ್ಲೂ ಇಂದು ಅಡಕೆ ಬೆಳೆಯುತ್ತಿದ್ದು ಇದರಿಂದ ಮಲೆನಾಡಿನ ಸಾಂಪ್ರದಾಯಿಕ ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅಲ್ಲದೆ ಇಳುವರಿಯೂ ಕಡಿಮೆಯಾಗಿದೆ. ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸರ್ಕಾರದಿಂದ ಎಲ್ಲ ನೆರವು ನೀಡಲಾಗುತ್ತಿದೆ. ಔಷಧ ಪೂರೈಕೆಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ರೈತ ಸಂಘಟನೆಗಳು ರೈತರ ಬೆನ್ನೆಲುಬಾಗಿ ಕೆಲಸ ಮಾಡಬೇಕು. ಭೂತಾನ್ ಅಡಕೆ ಆಮದು ಮಾಡುವುದಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಬೇಕಿದೆ ಎಂದರು.
ಬೆಳೆಗಳಿಗೆ ತಗುಲುತ್ತಿರುವ ರೋಗಗಳ ಬಗ್ಗೆ ರೈತರು ಧೃತಿಗೆಡಬಾರದು. ನಮ್ಮ ರೈತರೇ ತಜ್ಞರಾಗಿದ್ದು ಸವಾಲಾಗಿ ಸ್ವೀಕರಿಸಿ ಮಲೆನಾಡಿನ ಬೆಳೆಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು. ಅಡಕೆ ಬೆಳೆ ನಶಿಸುತ್ತಿದೆ ಎಂದು ಆತಂಕಪಡುವ ಬದಲು ಪರ್ಯಾಯ ಬೆಳೆಯತ್ತ ರೈತರು ಚಿಂತಿಸಬೇಕಿದೆ. ವಿಜ್ಞಾನಿಗಳು ಎಲೆಚುಕ್ಕೆ ರೋಗದ ಬಗ್ಗೆ ಮಾಡಿದ ಅಧ್ಯಯನ ಮತ್ತು ನೀಡಿದ ಪರಿಹಾರದ ಬಗ್ಗೆ ರೈತರಲ್ಲಿ ಅನುಮಾನ ಕಾಡುತ್ತಿದೆ. ಅವರು ಅಧ್ಯಯನ ಮಾಡಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಈ ಬಗ್ಗೆ ರೈತರಿಗೆ ವಾಸ್ತವ ತಿಳಿಸಿಕೊಡಬೇಕಿದೆ ಎಂದರು
ಶೋಧಾ ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ ಬೆಳ್ಳಕ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೋಧಾ ಾರ್ಮರ್ಸ್‌ ರೈತರ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಈಗಾಗಲೇ ಆಯೋಜಿಸಿ ಯಶಸ್ವಿಯಾಗಿದೆ. ಅಡಕೆಗೆ ಔಷಧ ಸಿಂಪಡಣೆಗಾಗಿ ದೋಟಿಗೆ ಸರ್ಕಾರ ಶೇ.90 ಸಬ್ಸಿಡಿ ನೀಡಬೇಕು. ಶೋಧಾ ಸಂಸ್ಥೆಗೆ 5 ಎಕರೆ ಜಾಗ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಕೇರಳದ ಸಾವಯವ ಕೃಷಿಕ ಅಚ್ಚುತನ್ ಮೋಹನಕುಮಾರ್ ಉದ್ಘಾಟಿಸಿದರು. ಕಾಳು ಮೆಣಸಿನ ಬೇಸಾಯ ಕ್ರಮಗಳ ಬಗ್ಗೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯ ಸಹ ಪ್ರಾಧ್ಯಾಪಕ ಡಾ.ನಾಗರಾಜಪ್ಪ ಅಡಿವಪ್ಪರ್ ಮಾಹಿತಿ ನೀಡಿದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ.ಜಿ.ಎನ್.ಪ್ರಕಾಶ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪುಟ್ಟಪ್ಪ ಇತರರಿದ್ದರು.
ಾರ್ಮಾ ಟಿವಿ, ಶ್ರಮಜೀವಿ ಕೃಷಿ ಮಾಸ ಪತ್ರಿಕೆ ಸಂಪಾದಕ ಡಾ. ವೆಂಕಟರಮಣ ಹೆಗಡೆ ಮಾತನಾಡಿ, ನೈಸರ್ಗಿಕ ಸಮತೋಲನದಿಂದ ಮಾತ್ರ ಎಲೆಚುಕ್ಕೆ ರೋಗಕ್ಕೆ ಪರಿಹಾರ ಸಿಗುತ್ತದೆ. ಇಲ್ಲವಾದಲ್ಲಿ ರೋಗಬಾಧೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಇಂದು ಅಡಕೆ ಕೇವಲ ಮಲೆನಾಡಿಗೆ ಸೀಮಿತವಾಗಿರದೆ ದೇಶದಾಚೆಗೂ ಹರಡಿದೆ. ಇಂದಲ್ಲ ನಾಳೆ ಅಪಾಯ, ಮಾರುಕಟ್ಟೆ ಕುಸಿತ ಸೇರಿ ಹಲವು ಸಮಸ್ಯೆಗಳು ಎದುರಾಗಬಹುದು ಅದಕ್ಕೆ ರೈತರು ಸಿದ್ಧರಾಗಿರಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net