ನಿಸರ್ಗದತ್ತ ಸಿಗುವ ಸಂಪನ್ಮೂಲ ಕಾಪಾಡಿಕೊಳ್ಳಿ

Conserve natural resources
ಮುಧೋಳ ತಾಲ್ಲೂಕಿನ ಚನ್ನಾಳ ಗ್ರಾಮದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಷಿ ವಿಜ್ಞಾನಿಗಳ ನಡಿಗೆ ರೈತರ ನಡೆಗೆ ಹಾಗೂ ಕಬ್ಬು ಮತ್ತು ಸೋಯಾ ಅವರೆ ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ಸಂವಾದ ಕಾರ್ಯಕ್ರಮಕ್ಕೆ ಧಾರವಾಡದ ಕಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಲ್.ಪಾಟೀಲ್ ಚಾಲನೆ ನೀಡಿದರು. ಡಾ.ಆರ್.ಬಿ.ಬೆಳ್ಳಿ, ದಾರವಾಡ ಡಾ.ಎಸ್.ಎಸ್.ಅಂಗಡಿ, ಡಾ.ಸೋಮನಗೌಡ ಜಿ,ಡಾ.ಜಿ.ಕೆ.ನಾಯ್ಡು, ಡಾ.ಆರ್.ಚನ್ನಕೇಶ ಇದ್ದರು.
Published on

ಮುಧೋಳ : ನಿಸರ್ಗದತ್ತ ಸಿಗುವ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳಿ ಎಂದು ಧಾರವಾಡದ ಕಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಲ್.ಪಾಟೀಲ್ ಎಂದು ಹೇಳಿದರು.

ಶುಕ್ರವಾರ ತಾಲ್ಲೂಕಿನ ಚನ್ನಾಳ ಗ್ರಾಮದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕಷಿ ವಿದ್ಯಾಲಯ ಧಾರವಾಡ, ಐ.ಸಿ.ಎ.ಆರ್.ಕಷಿ ವಿಜ್ಞಾನ ಕೇಂದ್ರ ಬಾಗಲಕೋಟೆ, ಕಷಿ ಇಲಾಖೆ, ಮುಧೋಳ ರೈತ ಸಂಪದ ರೈತರ ಉತ್ಪಾದಕ ಸಂಸ್ಥೆ ಚನ್ನಾಳ ಆಶ್ರಯದಲ್ಲಿ ನಡೆದ ಕಷಿ ವಿಜ್ಞಾನಿಗಳ ನಡಿಗೆ ರೈತರ ನಡೆಗೆ ಹಾಗೂ ಕಬ್ಬು ಮತ್ತು ಸೋಯಾ ಅವರೆ ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ಸಂವಾದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಇಳಿಜಾರಿಗೆ ಬದು ನಿರ್ಮಾಣ ಮಾಡಿ ನಂತರ ಮಡಿ ಮಾಡಿ ನೀರು ಇಂಗುವಂತೆ ಮಾಡಿದರೆ ಸವಳು ಜವಳು ಭೂಮಿಯಾಗುವದನ್ನು ತಡೆಯಬಹುದಾಗಿದೆ, ಭೂಮಿ ಸವಳು-ಜವಳಾಗಲು ಮೂಲ ಕಾರಣ ಈ ಭಾಗದ ನರಾವರಿ ಪದ್ಧರಿ ಯತೇಚ್ಚ ನೀರು ಬಳಕೆಯಿಂದ ಇದರ ನಿಯಂತ್ರಣಕ್ಕಾಗಿ ಕಡಿಮೆ ನೀರು ಬಳಕೆಯೊಂದಿಗೆ ಪ್ರತಿ ವರ್ಷ ಮಣ್ಣು ಪರೀಕ್ಷೆ ಮಾಡಬೇಕು, ರೈತರ ಮಕ್ಕಳು ಕಷಿ ಪದವಿದರರು, ಕಷಿ ವಿಜ್ಞಾನಿಗಳಾಗಬೇಕಾದರೆ ಪಿಯುಸಿಯಲ್ಲಿ ಜೀವಶಾಸದೊಂದಿಗೆ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ಕಷಿಯಲ್ಲಿ ಪದವಿ ಪಡೆದುಕೊಳ್ಳಬೇಕು ಇದಕ್ಕಾಗಿ ಕಷಿ ವಿಶ್ವವಿದ್ಯಾಲಯದಲ್ಲಿ ಶೇ 50ರಷ್ಟು ಸೀಟುಗಳನ್ನು ರೈತರ ಮಕ್ಕಳಿಗೆ ಮೀಸಲಾಗಿಟ್ಟಿದ್ದು ಇದರ ಸದೂಪಯೋಗವನ್ನು ರೈತರ ಮಾಡಿಕೊಳ್ಳಬೇಕು ಜೊತೆಗೆ ರೈತರ ಮಕ್ಕಳು ವಿಜ್ಞಾನಿಗಳಾಗಲು ಸಂಶೋದಕರಾಗಲು ನಮ್ಮ ಧಾರವಾಡ ವಿಶ್ವವಿದ್ಯಾಲಯದ ಏಳು ಜಿಲ್ಲೆಗಳಲ್ಲಿ ಇಪ್ಪತ್ತಾರು ಸಂಶೋಧನಾ ಕೇಂದ್ರಗಳಿವೆ ಇಲ್ಲಿ ವಿದ್ಯಾಭ್ಯಾಸ ಮಾಡಿದ ರೈತರ ಮಕ್ಕಳು ರೈತರಿಗೆ ಬೇಕಾದ ಹೊಸ ತಂತ್ರಜ್ಞಾನಗಳು ಕಲಿಯಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಕಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಡಿ.ಬಿರಾದಾರ ಮಾತನಾಡಿ ರೈತರ ಬ್ಯಾಂಕು ಮಣ್ಣು ಆಗಿದ್ದು ಅದರ ಸಂರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು ಕಷಿಯ ಜೊತೆಗೆ ಸಮಗ್ರ ಕಷಿಯನ್ನು ಮಾಡಬೇಕು ಜಾನುವಾರ, ಮೀನು ಸಾಕಾಣಿಕೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಹೇಳಿದರು.
ಬಾಗಲಕೋಟೆಯ ಜಂಟಿ ಕಷಿ ನಿರ್ದೇಶಕ ಲಕ್ಷತ್ಮಣ ಕಳ್ಳೆನ್ನವರ ಮಾತನಾಡಿ ಸಮಗ್ರ ಕಷಿಯಿಂದ ರೈತರ ಆದಾಯ ದ್ವಿಗುಣವಾಗುತ್ತದೆ,ರೈತ ಉತ್ಪಾದಕ ಗುಂಪುಗಳಿಂದ ರೈತರು ಬೆಳೆದ ಬೆಳೆಗಳ ಬೆಲೆ ನಿಗದಿಗೆ ಅನುಕೂಲವಾಗುತ್ತದೆ. ಹನಿ ನೀರಾವರಿ ಹಾಗೂ ಆಹಾರ ಉತ್ಪಾದಕ ವಸ್ತುಗಳ ನಿರ್ಮಾಣಕ್ಕೆ ಸರ್ಕಾರ ಸಾಕಷ್ಟು ಹಣದ ಸಹಾಯ ಮಾಡುತ್ತದೆ ಆತ್ಮ ನಿರ್ಭರ ಯೋಜನೆಯ ಸಾಕಾರವಾಗಲು ಸ್ವುಉದ್ಯೋಗ ಮಾಡಿಕೊಳ್ಳಿ ಹನಿ ನೀರಾವರಿಗೆ ಶೇ 90ರಷ್ಟು ಹಣ ಸಹಾಯ ಮಾಡಿತ್ತದೆ ಕಷಿ ವಿಜ್ಞಾನಿಗಳ ನಡಿಗೆ ರೈತರ ನಡೆಗೆ ಹಾಗೂ ಕಬ್ಬು ಮತ್ತು ಸೋಯಾ ಅವರೆ ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ಸಂವಾದ ಕಾರ್ಯಕ್ರಮ ಚನ್ನಾಳದಂತಹ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವುದು ಪ್ರಥಮ ಎಂದು ಹೇಳಿದರು.

ವಿಜಯಪುರ ಕಷಿ ವಿಸ್ತರಣಾ ಘಟಕದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಗತಿಪರ ರೈತ ಗೋವಿಂದಪ್ಪ ಗುಜ್ಜನವರ, ನಾಗಪ್ಪ ಅಂಬಿ, ಸಂತೋಷ ಪಾಟೀಲ್ ಶ್ರೀಕಾಂತ ಗುಜ್ಜನವರ, ದಾರವಾಡ ಕಷಿ ವಿಶ್ವವಿದ್ಯಾಲಯದ ಡಾ.ಎಸ್.ಎಸ್.ಅಂಗಡಿ, ಡಾ.ಸೋಮನಗೌಡ ಜಿ,ಡಾ.ಜಿ.ಕೆ.ನಾಯ್ಡು, ಡಾ.ಆರ್.ಚನ್ನಕೇಶ, ಸಂಕೇಶ್ವರದ ವಿಜ್ಞಾನಿ ಡಾ.ಸುನೀಲಕುಮಾರ ನೂಲಿ, ಡಾ.ಸುಧಾ ಎಸ್. ಬಾಗಲಕೋಟೆಯ ಕಷಿ ವಿಜ್ಞಾನ ಕೇಂದ್ರ ಡಾ.ಆರ್.ಎ.ನಂದಗಾವಿ, ಮುಧೋಳ ಕಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಬಿ.ದೊಡಮನಿ, ಜಮಖಂಡಿಯ ಉಪ ಕಷಿ ನಿರ್ದೇಶಕ ಡಾ.ಕೆ.ಎಸ್.ಅಗಸನಾಳ, ಚನ್ನಾಳದ ಡಾ.ಹನಮಂತ ಅಂಬಿ, ಪ್ರಗತಿಪರ ರೈತ ವೆಂಕಣ್ಣ ಸಾರವಾಡ ಇದ್ದರು.

ಆತ್ಮ ಶ್ರೇಷ್ಠ ಕಷಿಕ ಪ್ರಶಸ್ತಿ ವಿತರಣೆ

ಕಷಿಯಲ್ಲಿ ಸಾಧನೆ ಮಾಡಿದ ಕಷಿ ಇಲಾಖೆ ನೀಡುವ ಆತ್ಮ ಶ್ರೇಷ್ಠ ಕಷಿಕ ಪ್ರಶಸ್ತಿಯನ್ನು ಶಿರೋಳದ ಶ್ರೀಧರ ಮಲ್ಲಪ್ಪ ಮಂಟೂರ,ದಾದನಟ್ಟಿಯ ಶ್ರೀ ಶಿವನಗೌಡ ವೆಂಕಣಗೌಡ ಪಾಟೀಲ್, ಪೆಟ್ಲೂರದ ರಾಮವ್ವ ಕುಬೇರ ಲಮಾಣಿ, ಬೆಳಗಲಿಯ ಧರೆಪ್ಪ ಗಾಣಗೇರ,ಮುಗಳಖೋಡದ ಪರಮಾನಂದ ಪರಪ್ಪ ಜನವಾಡ ಅವರಿಗೆ ಆತ್ಮ ಶ್ರೇಷ್ಠ ಕಷಿಕ ಪ್ರಶಸ್ತಿ ನೀಡಿ ಗೌರವಿಸಿದರು.

ಆದಾಯದದಲ್ಲಿ ದ್ವಿಗುಣಗೂಡಿಸಿಕೊಂಡ ರೈತರಿಗೆ ಕಷಿ ವಿಜ್ಞಾನ ಕೇಂದ್ರದ ಬಾಗಲಕೋಟೆ ನೀಡುವ ಸನ್ಮಾನವನ್ನು ಮಹಾಲಿಂಗಪುರದ, ಮಹಾಲಿಂಗ ರಾವಳ್,ಮಂಟೂರದ ಮಲ್ಲಪ್ಪ ಮಲಘಾಣ,ಬೆಳಗಲಿಯ ಬಸವರಾಜ ಕಡಪಟ್ಟಿ, ಶಂಕರ ಹಿಠಾಣಿ, ವಂಟಗೋಡಿ ಬಸವರಾಜ ಗುಜ್ಜನವರ, ಕುಳಲಿಯ ಈರಪ್ಪ ಗಣಿ ಅವರನ್ನು ಸನ್ಮಾನಿಸಲಾಯಿತು.

ಜೊತೆಗೆ ಮಹಿಳೆಯರಿಂದ ಸಿರಿದಾನ್ಯಗಳಿಂದ ಮಾಡಿದ ಆಹಾರ ಪದಾರ್ಥ ಸ್ಪರ್ಧೆಯಲ್ಲಿ ವಿಜೇತರಿಗೆ ಅಕಾರಿಗಳು ಬಹುಮಾನ ನೀಡಿ ಗೌರವಿಸಿದರು.ಈ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net