ಸಿಂಹಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯ

10-AUG-GPT-2
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿದೇಸಾಯಿ ವಸತಿಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಸಿಂಹಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಆರ್.ಕೆ.ಮಧು ಭಾಗವಹಿಸಿದ್ದರು. ನಂಜುಂಡಸ್ವಾಮಿ ಇದ್ದರು.
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ವಿಶ್ವ ಸಿಂಹಗಳ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ, ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು, ಏಷಿಯಾದ ಸಿಂಹ ಭಾರತದ ಹೆಮ್ಮೆ. ಇವು ಗುಜರಾತ್‌ನ ಸಾಸನ್ ಗಿರ್ ಅರಣ್ಯದಲ್ಲಿ ಮಾತ್ರ ನೆಲೆಸಿವೆ. ಗಿರ್ ವಾಸಿಗಳಾದ ಸಿಂಹಗಳು ಅವನತಿಯ ಹಾದಿಯಲ್ಲಿದ್ದು ಅವುಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಇವುಗಳನ್ನು ನ್ಯಾಯಾಲಯದ ತೀರ್ಪಿನಂತೆ ಮಧ್ಯಪ್ರದೇಶದ ಕುನ್ಹೋ ಉದ್ಯಾನಕ್ಕೆ ಮರು ಪರಿಚಯಿಸಬೇಕಾಗಿದೆ. ಇತ್ತೀಚೆಗೆ ಆಫ್ರಿಕಾದ ಚೀತಾವನ್ನು ಈ ಅರಣ್ಯಕ್ಕೆ ಪರಿಚಯಿಸಿರುವುದು ಸ್ವಾಗತಾರ್ಹ. ಗುಜರಾತ್‌ನ ಸಿಂಹಗಳು ಸಮೀಪದ ಬಾರ್ದಾ ಉದ್ಯಾನಕ್ಕೆ ವಲಸೆಹೋಗಿ 17 ಸಂಖ್ಯೆಗೆ ಏರಿಕೆಯಾಗಿರುವುದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಸಹಶಿಕ್ಷಕ ನಂಜುಂಡಸ್ವಾಮಿ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net