ಅಳಿವಿನಂಚಿನ ತಳಿಗಳ ಸಂರಕ್ಷಣೆ

10 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಳಿವಿನಂಚಿನಲ್ಲಿರುವ ಕೃಷ್ಣ ವ್ಯಾಲಿ ಆಕಳುಗಳ ತಳಿಗಳನ್ನು ತಾಲೂಕಿನ ತೇಗೂರು ಎಮ್ಮೆ ತಳಿ ಸಂವರ್ಧನಾ ಕೇಂದ್ರದಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ. ಇದು ರಾಜ್ಯದ ಏಕೈಕ ಕೇಂದ್ರ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ತಾಲೂಕಿನ ತೇಗೂರ ಗ್ರಾಮದಲ್ಲಿರುವ ಎಮ್ಮೆ ತಳಿ ಸಂವರ್ಧನಾ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಎಮ್ಮೆ ತಳಿ ಸಂವರ್ಧನಾ ಕೇಂದ್ರವು 1910 ಆರಂಭವಾದ ಸಂಸ್ಥೆ. ಇಲ್ಲಿ ಜಾನುವಾರುಗಳ ಆಹಾರಕ್ಕೆ ಅನುಕೂಲವಾಗುವಂತೆ ನೀರಾವರಿ ಆಶ್ರಯದ 53 ಎಕರೆ ಕ್ಷೇತ್ರವಿದೆ. ಹೆಚ್ಚಿನ ಇಳುವರಿ ಕೊಡುವ ಸೂಪರ್ ಹೈಬ್ರಿಡ್ ನೇಪಿಯರ್, ಕಾಫ್ಸ್, ಗಿನಿಹುಲ್ಲು, ಗ್ರೇಝಿಂಗ್‌ಗಿನಿ, ಮೆಕ್ಕೆಜೊಳ, ಅಲಸಂದಿ, ಇತರ ಮೇವಿನ ಬೆಳೆಗಳನ್ನು ಬೆಳೆಯಲಾಗುತ್ತದೆ. ಹೈನೋದ್ಯಮದಲ್ಲಿ ಆಸಕ್ತರಿಗೆ ಅಽಕ ಇಳುವರಿ ನೀಡುವ ಮೇವಿನ ಬೀಜ, ಬೇರು ಮತ್ತು ಕಾಂಡಗಳನ್ನು ವಿತರಿಸಲಾಗುತ್ತದೆ. ಇದೇ ಕ್ಷೇತ್ರದಲ್ಲಿ ಹಂದಿ ಉತ್ಪಾದನಾ ಘಟಕವನ್ನು ಆರಂಭಿಸಲಾಗಿದೆ. ಇಲ್ಲಿ ಮಾಂಸ ಹಾಗೂ ಮರಿ ಉತ್ಪಾದನೆಯಲ್ಲಿ ಉತ್ಕೃಷ್ಟ ವಿದೇಶಿ ಹಂದಿ ತಳಿಗಳಾದ ಯಾರ್ಕಶೈರ್, ಡ್ಯೂರಾಕ್ ಮತ್ತು ಲ್ಯಾಂಡ್ ರೇಸ್ ಹಂದಿಗಳನ್ನು ಪಾಲನೆ ಮಾಡಲಾಗುತ್ತಿದೆ. ಆಸಕ್ತ ಸಾಕಾಣಿಕೆದಾರರಿಗೆ ಹಂದಿ ಮರಿಗಳನ್ನು ವಿತರಿಸಲಾಗುತ್ತದೆ ಎಂದರು.

ಎಮ್ಮೆ ತಳಿ ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ. ಬಸವರಾಜ ನರೇಗಲ್, ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ, ಮುಖ್ಯ ಪಶು ವೈದ್ಯಾಽಕಾರಿ ಡಾ. ಅನಿಲಕುಮಾರ ಶೀಲವಂತಮಠ, ಜಾನುವಾರು ಅಭಿವೃದ್ಧಿ ಅಽಕಾರಿ ವೈ.ವೈ. ಹರಿಜನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net