ಮಣ್ಣಿನ ಗಣಪ ಪ್ರತಿಷ್ಠಾಪಿಸಿ : ಡಿವೈಎಸ್‌ಪಿ ಪ್ರಶಾಂತ ಮುನೊಳ್ಳಿ ಹೇಳಿಕೆ

Ameengad
ಅಮೀನಗಡ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯಲ್ಲಿ ಡಿವೈಎಸ್‌ಪಿ ಪ್ರಶಾಂತ ಮುನೊಳ್ಳಿ ಮಾತನಾಡಿದರು. ಸುರೇಶ ಬೆಂಡೆಗುಂಬಳ, ಮಲ್ಲಿಕಾರ್ಜುನ ಕುಲಕರ್ಣಿ, ಜೆ.ಡಿ. ಹುಬ್ಬಳ್ಳಿಕರ ಇತರರಿದ್ದರು.
Published on

ಅಮೀನಗಡ: ಗಣೇಶ ಚತುರ್ಥಿ ಹಬ್ಬವನ್ನು ನಗರದಲ್ಲಿ ಎಲ್ಲರೂ ಶಾಂತಿ ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಡಿವೈಎಸ್‌ಪಿ ಪ್ರಶಾಂತ ಮುನೊಳ್ಳಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಹಬ್ಬದ ಅಂಗವಾಗಿ ಶುಕ್ರವಾರ ನಡೆದ ಶಾಂತಿಪಾಲನೆ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪನೆಗೆ ಮಹತ್ವ ನೀಡೋಣ ಎಂದರು.

ಸಿಪಿಐ ಸುರೇಶ ಬೆಂಡೆಗುಂಬಳ ಮಾತನಾಡಿ, ಧ್ವನಿವರ್ಧಕ ಬಳಕೆಗೆ ಸಂಬಂಧಿಸಿ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ಕೋಮು ಭಾವನೆ ಕೆರಳಿಸುವಂತಹ ಹಾಡು, ಸಂಭಾಷಣೆ ಬಿತ್ತರಿಸಬಾರದು. ಕಾಲಕಾಲಕ್ಕೆ ಸರ್ಕಾರಿ ನಿಯಮ ಪಾಲನೆಯಾಗಬೇಕು ಎಂದರು.

ಪಿಎಸ್‌ಐ ಮಲ್ಲಿಕಾರ್ಜುನ ಕುಲಕರ್ಣಿ, ಪಪಂ ಎ್ಡಿಎ ಜೆ.ಡಿ.ಹುಬ್ಬಳ್ಳಿಕರ, ಜೆಎಚ್‌ಐ ಸಂತೋಷ ವ್ಯಾಪಾರಿಮಠ, ಸದಸ್ಯ ಸಂತೋಷ ಕಂಗಳ, ಬಾಬು ಛಬ್ಬಿ, ಸಾರ್ವಜನಿಕರಾದ ರವಿ ರಾಠೋಡ, ಡಿ.ಪಿ.ಅತ್ತಾರ, ಅಜಮೀರ ಮುಲ್ಲಾ, ಹುಲಗಪ್ಪ ಕುರಿ, ನಾಗೇಶ ಗಂಜಿಹಾಳ, ಮಲ್ಲೇಶ ನಿಡಗುಂದಿ, ಯಮನೂರ ಕತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net