ಕೊನೋಕಾರ್ಪಸ್ ಗಿಡಗಳ ತೆರವುಗೊಳಿಸಿ

3 MANVI 02
ಮಾನ್ವಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜನಸೇವಾ ಫೌಂಡೇಷನ್ ತಾಲೂಕು ಘಟಕವತಿಯಿಂದ ನಿಷೇಧಿತ ಕೊನೋಕಾರ್ಪಸ್ ಪ್ರಭೇದ ಗಿಡಗಳ ನಾಶಕ್ಕೆ ಆಗ್ರಹಿಸಿ ಉಪತಹಸೀಲ್ದಾರ್ ವಿನಾಯಕರಾವ್‌ಗೆ ಮನವಿ ಸಲ್ಲಿಸಿದರು. ಜನಸೇವಾ ಫೌಂಡೇಷನ್ ರಾಜ್ಯಾಧ್ಯಕ್ಷರಾದ ಜಾವೇದ್‌ಖಾನ್, ಕಾರ್ಯಕರ್ತರಾದ ವೈ.ಗಂಗಾಧರರಾವ್ ಚನ್ನಬಸವ ಹೊಕ್ರಾಣಿ, ಪ್ರವೀಣ್, ಬಾಷ, ವೆಂಕಟೇಶ, ರೆಹಮಾನ್, ಕುಮಾರ ನಾಯಕ ಇನ್ನಿತರರು ಇದ್ದರು.
Published on

ಮಾನ್ವಿ: ಪಟ್ಟಣದ ರಾಜ್ಯ ಹೆದ್ದಾರಿಗಳ ರಸ್ತೆ ವಿಭಜಕಗಳಲ್ಲಿರುವ ನಿಷೇಧಿತ ಕೊನೋಕಾರ್ಪಸ್ ಪ್ರಭೇದಕ್ಕೆ ಸೇರಿದ ಗಿಡಗಳ ತೆರವಿಗೆ ಜನಸೇವಾ ಫೌಂಡೇಷನ್ ತಾಲೂಕು ಘಟಕ ಉಪತಹಸೀಲ್ದಾರ್ ವಿನಾಯಕರಾವ್‌ಗೆ ಮನವಿ ಸಲ್ಲಿಸಿತು.

ಇದನ್ನು ಓದಿ:

ಈ ಗಿಡಗಳು ಮನುಷ್ಯರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದ್ದು, ದೇಶದ ಹಲವು ನಗರಗಳಲ್ಲಿ ಈ ಪ್ರಭೇದದ ಗಿಡಗಳನ್ನು ಬೆಳೆಸುವುದನ್ನು ತಡೆಯಲಾಗಿದೆ.

ಈ ಕುರಿತು ತಾಲೂಕು ಆಡಳಿತ ಮುನ್ನೆಚ್ಚರಿಗೆ ವಹಿಸಿ ಕೊನೋಕಾರ್ಪಸ್ ಪ್ರಭೇದದ ಗಿಡಗಳನ್ನು ಕಿತ್ತು ನಾಶ ಪಡಿಸುವುದಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net