ಸಂಪರ್ಕ ಸೇತುವೆಗಳ ಅಭಿವೃದ್ಧಿಗೆ ಒತ್ತು

29mnv01
ಮಾನ್ವಿ ತಾಲೂಕಿನ ಮೂಷ್ಠೂರು ಗ್ರಾಮದಲ್ಲಿ ಮುಸ್ಟೂರು ಕ್ರಾಸ್‌ನಿಂದ ಜಗೀರ್‌ಪನ್ನೂರು ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಕಾಮಗಾರಿ ಸಚಿವ ಎನ್‌ಎಸ್ ಬೋಸರಾಜು, ಶಾಸಕ ಹಂಪಯ್ಯನಾಯಕ ಚಾಲನೆ ನೀಡಿದರು. ಪ್ರಮುಖರಾದ ಚಂದ್ರಶೇಖರ್ ಕುರ್ಡಿ, ಬಸವರಾಜ ಪಾಟೀಲ್ ಇದ್ದರು.
Published on

ಮಾನ್ವಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೇತುವೆಗಳು ಅಭಿವೃದ್ಧಿ ಮಾಡಿ ಗ್ರಾಮೀಣ ಜನರ ಸಂಕರ್ಪಕಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಚಿವ ಎನ್‌ಎಸ್ ಬೋಸರಾಜು ಹೇಳಿದರು.

ತಾಲೂಕಿನ ಮುಸ್ಟೂರ್ ಗ್ರಾಮದಲ್ಲಿ ಮಂಗಳವಾರ ಮುಸ್ಟೂರು ಕ್ರಾಸ್‌ನಿಂದ ಜಗೀರ್‌ಪನ್ನೂರು ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗ ಮಧ್ಯದ ಹಳ್ಳಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಮೈಕ್ರೋ ಯೋಜನೆ ಅಡಿಯಲ್ಲಿ 2.60 ಕೋಟಿ ರೂ. ವೆಚ್ಚದಲ್ಲಿ ಬಾಕ್ಸ್ ಕನ್ವರ್ಟ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಇತರೆ ಗ್ರಾಮಗಳಲ್ಲಿನ ಸೇತುವೆಗಳು ಮಳೆಗಾಲದಲ್ಲಿ ನೀರು ಬಂದು ಸಂಪರ್ಕಕ್ಕೆ ತೊಂದರೆಯಾಗುತ್ತಿದೆ ಅಂತಹ ಸೇತುವೆಗಳನ್ನು ಗುರುತಿಸಲಾಗಿದ್ದು, ಅದಷ್ಟು ಬೇಗ ಕಾಮಗಾರಿಗಳನ್ನು ಆರಂಭಿಸಲಾಗುವುದು. ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಹಂಪಯ್ಯನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರಸಾಬ್, ಪ್ರಮುಖರಾದ ಶರಣಯ್ಯನಾಯಕ ಗುಡದಿನ್ನಿ, ಕೆ.ಶಾಂತಪ್ಪ, ಜಯಣ್ಣ, ದೊಡ್ಡ ಬಸ್ಸಪ್ಪಗೌಡ, ಬಿ.ಕೆ.ಅಮರೇಶಪ್ಪ, ಬಾಲಸ್ವಾಮಿ ಕೊಡ್ಲಿ, ರುದ್ರಪ್ಪ ಅಂಗಡಿ, ಖಾಲೀದ್ ಸಾಹೇಬ್, ರೌಡೂರು ಮಹಾಂತೇಶಸ್ವಾಮಿ, ರಾಜಾ ಸುಭಾಸ್ ನಾಯಕ, ಚಂದ್ರಶೇಖರ್ ಕುರ್ಡಿ, ಬಸವರಾಜ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net