ಯಾತ್ರೆ ಮಾಡಿದ್ರೆ ದೇಶ ಉದ್ಧಾರ ಆಗಲ್ಲ ಅಂದ್ರು ಶಾಸಕ ನಿರಂಜನ್‌ಕುಮಾರ್...

c.s.niranjankumar
Published on

ಚಾಮರಾಜನಗರ: ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ಹಗರಣಗಳನ್ನು ಮಾಡಿ ದೇಶವನ್ನೇ ಲೂಟಿ ಮಾಡಿತು. ಈಗ ಯಾತ್ರೆ ಮಾಡಿದರೆ ಏನು ಪ್ರಯೋಜನ ಎಂದು ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಟೀಕಿಸಿದರು.


ಭಾರತ ಇಬ್ಭಾಗವಾಗದೆ ಇದ್ದರೂ ಭಾರತ್ ಜೋಡೋ ಹೆಸರಿನಲ್ಲಿ ಯಾತ್ರೆ ಮಾಡಲು ಹೊರಟಿರುವ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಭಿನ್ನಾಭಿಪ್ರಾಯಗಳೇ ತುಂಬಿರುವ ತನ್ನ ಪಕ್ಷವನ್ನು ಜೋಡಿಸುವ ಯಾತ್ರೆ ಮಾಡುವುದು ಸೂಕ್ತ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ಕೊಟ್ಟರು.


ರಾಜ್ಯ ಕಾಂಗ್ರೆಸ್‌ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಹುದ್ದೆಯ ರೇಸ್‌ನಲ್ಲಿದ್ದಾರೆ. ಚುನಾವಣೆ ಮೊದಲೇ, ಫಲಿತಾಂಶಕ್ಕೂ ಮುನ್ನವೇ ಪಕ್ಷದಲ್ಲಿ ಒಮ್ಮತವಿಲ್ಲ. ಆದ್ದರಿಂದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಬದಲು ಕಾಂಗ್ರೆಸ್ ಜೋಡೋ ಯಾತ್ರೆ ಮಾಡಲಿ. ಭಾರತ ಐಕ್ಯತಾ ಯಾತ್ರೆ ಹೆಸರಿನಲ್ಲೇ ಲೋಪವಿದೆ. ಅಖಂಡ ಭಾರತವನ್ನು ಜೋಡಿಸುತ್ತೇವೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net