ಕಾಂಗ್ರೆಸಿಗರು ಆರ್‌ಎಸ್‌ಎಸ್‌ನ ಸಂಘಟನಾ ಶಕ್ತಿ ಅರೆಯಿರಿ

ravi kushalappa
Published on

ಮಡಿಕೇರಿ: ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ಚಟುವಟಿಕೆ ನಿಷೇಧದ ಕುರಿತು ಮಾತನಾಡುವ ಮೊದಲು ಆರ್‌ಎಸ್‌ಎಸ್‌ನ ಸಂಘಟನಾ ಶಕ್ತಿಯನ್ನು ಅರಿತುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೇಯಂಡ ರವಿ ಕುಶಾಲಪ್ಪ ಹೇಳಿದರು.

ಯುವಕರಲ್ಲಿ ದೇಶಭಕ್ತಿಯ ಪವಿತ್ರ ಭಾವನೆ ಬಿತ್ತುವ ಜತೆಗೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಆರ್‌ಎಸ್‌ಎಸ್ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಜನರ ನೆರವಿಗೆ ಧಾವಿಸುತ್ತಾರೆ. ಪ್ರಚಾರ ಪಡೆಯದೆ ನಿಸ್ವಾರ್ಥದಿಂದ ದುಡಿಯುವ ಕೋಟಿ ಕೋಟಿ ಮನಸುಗಳು ಸಂಘ ಪರಿವಾರದಲ್ಲಿವೆ. ಇದನ್ನು ಅರ್ಥೈಸಿಕೊಳ್ಳದ ಪ್ರಿಯಾಂಕ್ ಖರ್ಗೆಯವರು ಸಂಘ ಪರಿವಾರದ ಚಟುವಟಿಕೆಗಳ ನಿಷೇಧದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ಬಿಜೆಪಿ ಎಸ್.ಸಿ.ಮೋರ್ಚದ ಅಧ್ಯಕ್ಷ ಪಿ.ಎಂ.ರವಿ, ಮಾಜಿ ಮೂಡ ಅಧ್ಯಕ್ಷ ರಮೇಶ್ ಹೊಳ್ಳ, ನಗರಸಭಾ ಸದಸ್ಯ ಎಸ್.ಸಿ.ಸತೀಶ್, ಪ್ರಮುಖರಾದ ಮಂದಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net