ಕಾಂಗ್ರೆಸ್ ಗ್ಯಾರಂಟಿಗಳು ಅವೈಜ್ಞಾನಿಕ

AAP download
Published on

ಚಿತ್ರದುರ್ಗ: ಪಂಜಾಬ್ ಮತ್ತು ಹೊಸದಿಲ್ಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಅನುಷ್ಠಾನಗೊಳಿಸಿರುವ ಗ್ಯಾರಂಟಿಗಳು ಅತ್ಯಂತ ವೈಜ್ಞಾನಿಕವಾಗಿವೆ. ಆದರೆ, ರಾಜ್ಯದಲ್ಲಿ ಗೆಲ್ಲುವ ಕಾರಣಕ್ಕೆ ಕಾಂಗ್ರೆಸ್ ಆತುರವಾಗಿ ಗ್ಯಾರಂಟಿ ಘೋಷಿಸಿದೆ ಎಂದು ಪಕ್ಷದ ರಾಜ್ಯ ದಕ್ಷಿಣ ವಿಭಾಗದ ಸಂಘಟನಾ ಕಾರ‌್ಯದರ್ಶಿ ಬಿ.ಟಿ.ನಾಗಣ್ಣ ಹೇಳಿದರು.

ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ಕಾರ‌್ಯಕರ್ತರ ಸಭೆಯಲ್ಲಿ ಮಾತನಾಡಿ, ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪರಾಮರ್ಶಿಸದೆ ಅವಸರದಲ್ಲಿ ಗ್ಯಾರಂಟಿಗಳನ್ನು ಘೋಷಿಸಿದೆ. ನಮ್ಮ ಸರ್ಕಾರಗಳಿಂದ ಪ್ರೇರಣೆಗೊಂಡು ಘೋಷಿಸಿರುವ ಗ್ಯಾರಂಟಿಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗದ ಎಂದರು.

ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ಮುಖಂಡರಾದ ವಿ.ಜಗದೀಶ್, ಬಿ.ಇ.ಜಗದೀಶ್, ತಿಪ್ಪೇಸ್ವಾಮಿ, ಪಾಪಣ್ಣ, ಮಹಾಂತೇಶ್, ರಾಮ, ಲೋಕೇಶ್ವರಪ್ಪ, ತಿಮ್ಮಪ್ಪ, ಗುರುಪ್ರಸಾದ್, ಲಿಂಗರಾಜ್, ತನ್ವೀರ್, ವರಲಕ್ಷ್ಮೀ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net