ಬಿಜೆಪಿಗೆ ಸುಳ್ಳುಗಳೇ ಬಂಡವಾಳ - ಸಂಸದ ರಾಜಶೇಖರ ಹಿಟ್ನಾಳ ಟೀಕೆ

tvg-1
ತಾವರಗೇರಾದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿದರು. ಮುಖಂಡ ದೊಡ್ಡ ಬಸನಗೌಡ ಬಯ್ಯಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ನಾಲತವಾಡ, ಪ.ಪಂ.ಅಧ್ಯಕ್ಷ ನಾರಾಯಣಗೌಡ ಮಡಿಕೇರಿ ಇನ್ನಿತರರಿದ್ದರು.
Published on

ತಾವರಗೇರಾ: ಆಡಳಿತ ಪಕ್ಷದವರ ಅಭಿವೃದ್ಧಿಸಹಿಸದೆ ಬಿಜೆಪಿ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಲೋಚನಾ ಸಭೆಯಲ್ಲಿ ಮಾತನಾಡಿದರು. ಬಿಜೆಪಿಯವರು ಸುಳ್ಳುಗಳನ್ನೇ ಬಂಡವಾಳ. ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ದೂರಿದರು.

ಮುಖಂಡ ದೊಡ್ಡ ಬಸನಗೌಡ ಬಯ್ಯಪುರ ಮಾತನಾಡಿ, ಅಭಿವೃದ್ಧಿ ಕಾರ್ಯಗಳು ಮುಂಬರುವ ಜಿಪಂ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆ. ಅಲ್ಲದೆ ಕಾರ್ಯಕರ್ತರ ಪಾತ್ರವೂ ಮುಖ್ಯ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ನಾಲತವಾಡ, ಮುಖಂಡರಾದ ಲಾಡ್ಳೆ ಮಶಾಕ್ ದೋಟಿಹಾಳ, ಬಸನಗೌಡ ಮಾಲಿ ಪಾಟೀಲ, ಜಿ.ಪಂ ಮಾಜಿ ಸದಸ್ಯ ಹನಮಗೌಡ ಪಾಟೀಲ, ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ವೀರನಗೌಡ ಪಾಟೀಲ, ಕುಷ್ಟಗಿ ಪುರಸಭೆ ಸದಸ್ಯ ವಸಂತ ಮೇಲಿನಮನಿ, ತಾಪಂ ಮಾಜಿ ಸದಸ್ಯ ವೀರೇಶ ಗುರಿಕಾರ, ಪ.ಪಂ.ಅಧ್ಯಕ್ಷ ನಾರಾಯಣಗೌಡ ಮಡಿಕೇರಿ, ಸದಸ್ಯರಾದ ಶ್ರೀನಿವಾಸ ಗುಡಿಸಲಿ, ಶಾಮಣ್ಣ ಭಜಂತ್ರಿ, ಶಶಿಕಲಾ ಬೆಳೆಗುಡ್ಡ , ಬೇಬಿ ರೇಖಾ ಉಪ್ಪಳ, ಅನುಷ್ಠಾನ ಸಮಿತಿ ಸದಸ್ಯ ಅಮರೇಶ ಗಾಂಜಿ, ಅಮರೇಶ ಕುಂಬಾರ, ಶಾಮಣ್ಣ ಮಡ್ಡೇರ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net