ಹಳೆಯಂಗಡಿ ಉಪಚುನಾವಣೆ, ಕಾಂಗ್ರೆಸ್‌ಗೆ ಜಯ

New Project (28)
Published on

ಮೂಲ್ಕಿ: ತಾಲೂಕು ವ್ಯಾಪ್ತಿಯ ಹಳೆಯಂಗಡಿ ಗ್ರಾಪಂ ನ ಒಂದು ವಾರ್ಡಿಗೆ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಚಿತ್ರ ಪ್ರಸನ್ನ ಕುಮಾರ್ ಭರ್ಜರಿ ಜಯ ಗಳಿಸಿದ್ದಾರೆ.

ಚಲಾವಣೆಯಾದ ಒಟ್ಟು 556 ಮತಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸುಚಿತ್ರ ಪ್ರಸನ್ನ ಕುಮಾರ್ ಅವರಿಗೆ 360 ಮತಗಳು, ಬಿಜೆಪಿ ಬೆಂಬಲಿತ ಸುಂದರಿ ಸದಾಶಿವ ಅವರಿಗೆ 188 ಮತಗಳು ದೊರಕಿವೆ. 8 ಮತಗಳು, ಅಸಿಂಧು ಗೊಂಡಿವೆ.

ಪಂಚಾಯಿತಿ ಮಾಜಿ ಅಧ್ಯಕ್ಷೆ ಜಲಜಾ ಅವರ ಸದಸ್ಯತ್ವ ರದ್ದಾದ ಕಾರಣ ಮರು ಚುನಾವಣೆ ನಡೆದಿತ್ತು. ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸದಸ್ಯರು ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net