ಕಾಂಗ್ರೆಸ್ ಗೆಲುವು ಖಚಿತ

HYR CONGRESS
Published on

ಹಿರಿಯೂರು: ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಕೆಪಿಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಜೆಜೆ ಹಟ್ಟಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರ ಶ್ರಮ, ಜನರು ತೋರಿದ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಲೋಕಸಭೆ ಚುನಾವಣೆಯಲ್ಲೂ ಇದೇ ವಿಶ್ವಾಸ ಪಕ್ಷಕ್ಕೆ ಲಭಿಸಲಿದೆ ಎಂದರು.

ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ , ಕಾರ್ಯಕರ್ತರ ಸಂಘಟನೆಗೆ, ಶಕ್ತಿ ಮೀರಿ ಶ್ರಮಿಸುತ್ತಿದ್ದು, ಸ್ಥಳೀಯ, ಮಾದಿಗ ಸಮುದಾಯದ ಯುವಕ ಆಗಿರುವ ನನಗೆ ಪಕ್ಷ ಟಿಕೆಟ್ ಕೊಡುವ ವಿಶ್ವಾಸ ಇದೆ ಎಂದು ಹೇಳಿದರು.

ಲಿಡ್ಕ್ ಅಧ್ಯಕ್ಷ ಒ.ಶಂಕರ್ ಮಾತನಾಡಿ, ಸ್ಥಳೀಯ, ಮಾದಿಗ ಸಮುದಾಯದ ಡಾ.ಬಿ.ತಿಪ್ಪೇಸ್ವಾಮಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು, ವರಿಷ್ಠರು ಮನ್ನಣೆ ನೀಡುವ ವಿಶ್ವಾಸ ಇದೆ ಎಂದರು.

ಮುಖಂಡರಾದ ಖಂಡೇನಹಳ್ಳಿ ಡಿ.ಚಿದಾನಂದ್, ಅಡಿವಪ್ಪ, ಮಲ್ಲಪ್ಪ, ಜಗನ್ನಾಥ್, ಮಂಜುನಾಥ್, ರಂಗಸ್ವಾಮಿ, ಸ್ವಾಮಿ, ಆಲೂರು ಶ್ರೀನಿವಾಸ್, ಶಿವು ಹಾಗೂ ಮಾದಿಗ, ಯಾದವ, ಒಕ್ಕಲಿಗ ಸಮುದಾಯದ ಮುಖಂಡರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net