

ಶಿವಮೊಗ್ಗ: ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಎನ್ನುವ ಮಂಕುಬೂದಿ ಎರಚಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಅಧಿಕಾರ ಕೊಟ್ಟಿದ್ದಕ್ಕೆ ಕಳೆದ ಆರು ತಿಂಗಳಿಂದ ಜನರು ಪರಿತಪಿಸುತ್ತಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನಕುಮಾರ್ ದೂರಿದರು.
ನಗರದಲ್ಲಿ ಸೋಮವಾರ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಬಂದರೂ ಸಾಮಾನ್ಯವಾಗಿ ಆರು ತಿಂಗಳವರೆಗೆ ಪ್ರಶ್ನೆ ಮಾಡುವುದಿಲ್ಲ. ಆದರೆ ಈ ಸರ್ಕಾರ ನಾಲ್ಕು ತಿಂಗಳಿಂದಲೇ ಟೀಕೆಗೆ ಒಳಗಾಗುತ್ತಿರುವ ಯಾವುದೇ ಸರ್ಕಾರ ದೇಶದಲ್ಲಿದ್ದಾರೆ ಅದು ಕರ್ನಾಟಕ ಮಾತ್ರ. ಕ್ಷೇತ್ರದಲ್ಲಿ ಸಣ್ಣಪುಟ್ಟ ಸಮಸ್ಯೆಗಳ ಪರಿಹರಿಸಲು ಅನುದಾನ ಅಗತ್ಯ. ಆದರೆ ಶಾಸಕರ ನಿಧಿ ಕೂಡ ಬಿಡುಗಡೆ ಆಗುತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮಾಜಿ ಶಾಸಕರು, ಜಿಪಂ, ತಾಪಂ ಮಾಜಿ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುತ್ತಿದೆ. ಆ ಪಕ್ಷಕ್ಕೆ ನಂಬಿಕೆಯೇ ಇಲ್ಲ. ಜೆಡಿಎಸ್ ಕಾರ್ಯಕರ್ತರಿಗೆ ಇನ್ಮುಂದೆ ದೊಡ್ಡ ಸವಾಲುಗಳಿವೆ. ರೈತರು, ಕೂಲಿ ಕಾರ್ಮಿಕರು, ಕೈಗಾರಿಕೋದ್ಯಮಿಗಳಿಗೆ ತೊಂದರೆ ಕೊಡುತ್ತಿದ್ದು ಇಂತಹ ಸಂದರ್ಭಗಳಲ್ಲಿ ಪಕ್ಷ ಹೋರಾಟಕ್ಕೆ ಸಜ್ಜಾಗಬೇಕಿದೆ.