

ರಾಯಚೂರು ಕಾಶ್ಮೀರದಲ್ಲಿ ಉಗ್ರವಾದಿಗಳ ನಡೆಸಿರುವ ಕೃತ್ಯ ಖಂಡನೀಯವಾಗಿದ್ದು, ಇಂತಹ ಕೃತ್ಯಗಳು ನಡೆಯದಂತೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದೊಂದಿಗೆ ಕಾಂಗ್ರೆಸ್ ಪಕ್ಷ ಬೆಂಬಲವಾಗಿ ನಿಲ್ಲುತ್ತದೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಪಾಕಿಸ್ತಾನದೊಂದಿಗೆ ಯುದ್ದವೇ ಬೇಡ ಎಂದು ಹೇಳಿಲ್ಲ. ಸದ್ಯದಪರಸ್ಥಿತಿಯನ್ನು ಅವಲೋಕಿಸಿ ನಿರ್ಧರಿಸ ಬೇಕೆಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಭಯೋತ್ಪಾದನೆ, ಉಗ್ರವಾದವನ್ನು ಹತ್ತಿಕ್ಕ ಬೇಕೆನ್ನುವನಿರ್ಧಾರ ಮಾಡಿದೆ. ಈಗಾಗಲೇ ಪಕ್ಷ ವರಿಷ್ಠರಾದ ರಾಹುಲಗಾಂಽ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲುವದಾಗಿ ಹೇಳಿ ಪತ್ರವೂ ಬರೆದಿದ್ದಾರೆ. ಸಿಎಂ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದರು.
ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಗಣತಿ ವರದಿ ಇನ್ನೂ ಬಹಿರಂಗವಾಗಿಲ್ಲ. ೧ ಲಕ್ಷ ೨೫ ಸಾವಿರ ಜನ ಸರ್ಕಾರಿ ನೌಕರರು ನಡೆಸಿರು ಗಣತಿಯನ್ನು ಸುಳ್ಳೆಂದು ಹೇಳಲಾಗದು. ಜನರು ನೀಡಿರುವ ಮಾಹಿತಿಯನ್ನು ಗಣತಿಯಲ್ಲಿ ಉಲ್ಲೇಖಿಸಲಾಗಿದೆ. ಗಣತಿ ವರದಿ ಬಹಿರಂಗವಾಗಿ ಮುಂದೇನು ಮಾಡಬೇಕೆನ್ನುವ ನಿರ್ಧಾರವನ್ನು ಸರ್ಕಾರ ಸಮರ್ಥವಾಗಿ ಕೈಗೊಳ್ಳುತ್ತದೆ. ಗಣತಿ ವರದಿಯನ್ನು ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ, ಜನರ ಅಭಿಪ್ರಾಯ ಪಡೆದು ಕ್ರಮವಹಿಸಲಾಗುತ್ತದೆ ಎಂದರು.
ಕಾAಗ್ರೆಸ್ ಪಕ್ಷ ದೇಶದಲ್ಲಿಯೇ ಜಾತಿಗಣತಿ ನಡೆಯಬೇಕನ್ನುವ ಒತ್ತಾಯ ಮಾಡುತ್ತಿದೆ. ರಾಹುಲ ಗಾಂಽಯವರು ಜಾತಿ ಗಣತಿ ನಡೆಸಬೇಕೆನ್ನುವ ಒತ್ತಾಯ ಮಾಡಿದ್ದಾರೆ.ರಾಜ್ಯದಲ್ಲಿ ಗಣತಿಯಾಗಿದೆ ಅಂಕಿ ಅಂಶಗಳ ಕುರಿತು ಚರ್ಚೆಗಳು ನಡೆದು ಮುಂದಿನ ನಿರ್ಧಾರ ಸರ್ಕಾರ ಕೈಗೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಿಗಿರಿ, ಸದಸ್ಯ ಜಯಣ್ಣ, ದರೂರು ಬಸವರಾಜ, ಮಹ್ಮದ ಶಾಲಂ ಇದ್ದರು.