ಕಾಂಗ್ರೆಸ್ ಬೆಂಬಲಿತರಿಗೆ ಆಡಳಿತದ ಚುಕ್ಕಾಣಿ

RemasterDirector_1a5c03258
ಪಿರಿಯಾಪಟ್ಟಣ ತಾಲೂಕಿನ ರಾಮನಾಥತುಂಗ ಗ್ರಾಪಂನ ಹೊಸಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ವಿಜೇತರಾದವರನ್ನು ಮುಖಂಡರು ಅಭಿನಂದಿಸಿದರು. ಆರ್.ಎಸ್.ಮಹದೇವ್, ಆರ್.ಟಿ.ರೇವಣ್ಣ, ಹರೀಶ್, ಪರಮೇಶ್, ಆರ್.ಎ.ಮಹದೇವ ಇತರರು ಇದ್ದಾರೆ.
Published on

ಪಿರಿಯಾಪಟ್ಟಣ: ತಾಲೂಕಿನ ರಾಮನಾಥತುಂಗ ಗ್ರಾಮ ಪಂಚಾಯಿತಿಯ ಹೊಸಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ 9 ಜನ ಕಾಂಗ್ರೆಸ್ ಬೆಂಬಲಿತರು ಜಯಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಹಕಾರ ಸಂಘದ 10 ನಿರ್ದೇಶಕರ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಒಂಬತ್ತು ಜನ ಕಾಂಗ್ರೆಸ್ ಬೆಂಬಲಿತರು ಮತ್ತು ಒಬ್ಬರು ಜೆಡಿಎಸ್ ಬೆಂಬಲಿತರು ಜಯಶಾಲಿಯಾಗಿದ್ದಾರೆ.

ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಮಾದೇಗೌಡ, ಪಾಲಾಕ್ಷ, ಬೀರೇಶ್, ರಮೇಶ್, ವಿರೂಪಾಕ್ಷ, ಬೊಮ್ಮರಾಯ, ಸುರೇಶ, ನಿಂಗರಾಜ್, ಭಾಗ್ಯ, ಸಾಕಮ್ಮ ಅವರು ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಹುಣಸೂರು ಸಹಕಾರ ಇಲಾಖೆಯ ಹಿರಿಯ ನಿರೀಕ್ಷಕ ಸಿ.ಎನ್.ಗಿರೀಶ್ ವಿಜೇತರ ಹೆಸರುಗಳನ್ನು ಘೋಷಿಸಿದರು.

ತಾಪಂ ಮಾಜಿ ಸದಸ್ಯ ಆರ್.ಎಸ್.ಮಹದೇವ್ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಒಪ್ಪಿ ಸ್ಥಳೀಯ ಸಂಸ್ಥೆಗಳಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಟಿ.ರೇವಣ್ಣ, ಗ್ರಾಪಂ ಸದಸ್ಯರಾದ ಹರೀಶ್, ಪರಮೇಶ್, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್.ಎ.ಮಹದೇವ, ಮುಖಂಡರಾದ ಆರ್.ಟಿ.ರಾಮನಾಯಕ, ಎಂ.ಬೋರೇಗೌಡ, ಪುನೀತ್, ಮಹೇಶ್, ಉಮೇಶ್, ಮಾಯಿಗೌಡ, ಜಗದೀಶ್, ಚಂದ್ರಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net