ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ

13kkr2(1-25 vssbn ele vijayotsava
ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ವಿಜೇತರಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಂಭ್ರಮಿಸಿದರು. ಸುರೇಶ್, ಕಾಯಿ ಸುರೇಶ್, ಚಂದ್ರು, ತಾರಾನಾಥ್, ಕೆ.ಎನ್. ಪುಟ್ಟೇಗೌಡ ಮತ್ತಿತರರಿದ್ದರು.
Published on

ಕಿಕ್ಕೇರಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿರುವ ಸಂಘದ ನಿರ್ದೇಶಕರ ಆಯ್ಕೆಯ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ 11ನಿರ್ದೇಶಕರ ಆಯ್ಕೆಗೆ 23 ಸದಸ್ಯರು ಉಮೇದುವಾರಿಕೆ ಸಲ್ಲಿಸಿದ್ದರು. ಇದರಲ್ಲಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು ವಿಜೇತರಾದರು. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ 3 ಸದಸ್ಯರು ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರದಿಂದ ಅವಿರೋಧವಾಗಿ ಕೆ.ಎಸ್.ಶಿವರಾಮಯ್ಯ ಆಯ್ಕೆಯಾದರು.

ಸತತವಾಗಿ 2 ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಸಂಘದಲ್ಲಿ ನಿರ್ದೇಶಕರಾಗಿ ಮೇಲುಗೈ ಸಾಧಿಸಿದ್ದು, ಈ ಬಾರಿಯೂ ಕಾಂಗ್ರೆಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿತು. ಒಟ್ಟು 2432 ಮತದಾರರಲ್ಲಿ 2390 ಮತದಾರರು ಹಕ್ಕು ಚಲಾಯಿಸಿದರು.

ಕಾಂಗ್ರೆಸ್ ಬೆಂಬಲಿತರಾದ ಅಕ್ಷಯ್‌ಕುಮಾರ್, ಪಾಪೇಗೌಡ, ಮಹೇಂದ್ರ, ಕಾಯಿ ಸುರೇಶ್, ಕೆ.ವೈ.ಹರೀಶ, ಕೆ.ಜೆ. ಮಂಜುನಾಥ, ಕೋಮಲಾ ಪುಟ್ಟೇಗೌಡ, ನೀಲಾಮಣಿ ಮಹದೇವ ಆಯ್ಕೆಯಾದರೆ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬೆಂಬಲಿತ ನಿರ್ದೇಶಕರಾದ ಕೆ.ಬಿ.ಶೇಖರ, ಕೆ.ಎಲ್.ಪುಟ್ಟರಾಜು, ಕೆ.ಎಂ. ಮುರುಳೀಧರ ಚುನಾಯಿತರಾದರು.

ವಿಜೇತ ನಿರ್ದೇಶಕರಿಗೆ ಕೆಪಿಸಿಸಿ ಸದಸ್ಯ ಸುರೇಶ್ ಅಭಿನಂದಿಸಿದರು. ಮುಖಂಡರಾದ ಜಾಣೇಗೌಡ, ಮಧುರ ಮಹದೇವು, ಸಣ್ಣಪ್ಪ, ತಾರಾನಾಥ್, ಕೆ.ಎನ್. ಪುಟ್ಟೇಗೌಡ, ಲಕ್ಷ್ಮೀಪುರ ಚಂದ್ರು, ಎಲ್.ಪಿ. ದೇವರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net