ಸೊರಬ: ಹುರುಳಿಯಲ್ಲಿ ಕೈ ಬೆಂಬಲಿತರ ಮೇಲುಗೈ

10sor5
ಹುರುಳಿ ಗ್ರಾಪಂನ ಅಧ್ಯಕ್ಷೆ ಅನಸೂಯ ಶಿವಕುಮಾರ್, ಉಪಾಧ್ಯಕ್ಷೆ ಜಿ.ಮಂಜುಳಾ ಅವರನ್ನು ಪ್ರಮುಖರು ಅಭಿನಂದಿಸಿದರು. ಚೌಟಿ ಚಂದ್ರಶೇಖರ್, ಪರಶುರಾಮ್, ರಮೇಶ್, ಗಣಪತಿ, ಶಿವಕುಮಾರ ಇತರರಿದ್ದರು.
Published on

ಸೊರಬ: ತಾಲೂಕಿನ ಆನವಟ್ಟಿ ಹೋಬಳಿಯ ಹುರುಳಿ ಗ್ರಾಪಂನ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದರೆ, ಬಿಜೆಪಿ ಬೆಂಬಲಿಗರು ಮುಖಭಂಗ ಅನುಭವಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅನಸೂಯ ಶಿವಕುಮಾರ್ 7 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ರೇಣುಕಮ್ಮ 5 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ.ಮಂಜುಳಾ 6 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಪ್ರತಿಸ್ಪರ್ಧಿ ಎಂ.ಮಂಜುಪ್ಪ 5 ವೋಟುಗಳನ್ನು ಪಡೆದು ಪರಭಾವಗೊಂಡರು. ಒಂದು ಮತ ತಿರಸ್ಕೃತಗೊಂಡಿತು. ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಹಾಯಕ ತೋಟಗಾರಕ ಅಧಿಕಾರಿ ದೇವರಾಜ ಅರಸು ಚುನಾವಣಾಧಿಕಾರಿಯಾಗಿ ಕಾರ್ಯನಿವಹಿಸಿದರು. ಪಿಡಿಒ ಮಂಜಪ್ಪ ಸಹಕರಿಸಿದರು. ಮುಖಂಡರಾದ ಚೌಟಿ ಚಂದ್ರಶೇಖರ್, ಪರಶುರಾಮ್, ರಮೇಶ್, ಗಣಪತಿ, ಶಿವಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net